ಕಿಚ್ಚ ಸುದೀಪ್ ಚಿತ್ರಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!!

17 Dec 2018 3:39 PM | Entertainment
165 Report

ಇತ್ತಿಚಿಗೆ ಸ್ಯಾಂಡಲ್‌ವುಡ್‌ನ ಭಾರಿ ಬೇಡಿಕೆಯ ನಟ ಎಂದೆ ಹೇಳುತ್ತಿರುವ ಕಿಚ್ಚ ಸುದೀಪ್ ಅಭಿನಯಿಸಿಯಿರುವ ಕೋಟಿಗೊಬ್ಬ 3 ಚಿತ್ರಕ್ಕೆ ಇತ್ತಿಚಿಗೆ ಭಾರಿ ಬೇಡಿಕೆ‌ ಶುರುವಾಗಿದೆ. ಸದ್ಯ ಪೈಲ್ವಾನ್ ಚಿತ್ರರಂಗದಲ್ಲಿ ಬ್ಯುಸಿಯಿರುವ ಸುದೀಪ್ ಮುಂದಿನ ಚಿತ್ರ ಕೋಟಿಗೊಬ್ಬ 3ಗೆ ಈಗಾಗಲೇ ಬೇಡಿಕೆ ಪ್ರಾರಂಭವಾಗಿದೆ‌.ನಿರ್ದೇಶಕ ಶಿವ ಕಾರ್ತಿಕ್ ಬೆಂಗಳೂರಲ್ಲಿ ನಡೆಯುತ್ತಿದೆ.

ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳುವ ಮೊದಲೇ, ಸ್ಯಾಟಲೈಟ್ ರೈಟ್ಸ್ಗಾಗಿಪೈಪೋಟಿ ಪ್ರಾರಂಭವಾಗಿದೆ. ಹಿಂದಿ ಡಬ್ಬಿಂಗ್ ಒಂಬತ್ತು ಕೋಟಿಹಾಗೂ ಕನ್ನಡದ ಚಿತ್ರಕ್ಕೆ 21 ಕೋಟಿಗೆಸ್ಯಾಟಲೈಟ್ ರೈಟ್ಸ್ ಪಡೆಯಲು ವಿತರಕರು ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದೆ.. ಆದರೆ ನಿರ್ಮಾಪಕ ಸೂರಪ್ಪಬಾಬು ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳುವ ತನಕ ಸ್ಯಾಟಲೈಟ್ ಹಕ್ಕನ್ನು ಯಾರಿಗೂ ಮಾರಾಟ ಮಾಡದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

Edited By

Manjula M

Reported By

Manjula M

Comments