ಬಿಡುಗಡೆಗೂ ಮೊದಲೇ 'ಕೆಜಿಎಫ್’ಗೆ ಬಿಗ್ ಶಾಕ್ : ಸಿನಿಮಾ ಆನ್ ಲೈನ್ ನಲ್ಲಿ ಲೀಕ್

17 Dec 2018 9:57 AM | Entertainment
811 Report

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಡಿಸೆಂಬರ್ 21ಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ವಿಷಯ…. ಈ ನಡುವೆ ಕೆಜಿಎಫ್ ಸಿನಿಮಾ ಆನ್ ಲೈನ್ ನಲ್ಲಿ ಸೆನ್ಸಾರ್ ಕಾಪಿಯು ಲೀಕ್ ಆಗಿದೆ ಎನ್ನುವ ಸಂದೇಶವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದು ವೇಳೆ ವೈರಲ್ ಆಗಿರುವ ಸುದ್ದಿ ನಿಜವೇ ಆಗಿದ್ದರೆ, ಸಿನಿಮಾಕ್ಕೆ ದೊಡ್ಡ ಹೊಡೆತ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ..

ಕಳೆದ ಮೂರು ವರ್ಷದಿಂದ ಸಾಕಷ್ಟು ನೀರಿಕ್ಷೆಯೊಂದಿಗೆ ಕೆಜಿಎಫ್ ಸಿನಿಮಾ ಐದು ಸೇರಿ ಸುಮಾರು 2 ಸಾವಿರ ಸಿನಿಮಾ ಮಂದಿರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ದಿನಗಣನೆ ಪ್ರಾರಂಭವಾಗಿದೆ.  ನಟ ಯಶ್ ನ್ಯೂ ಲುಕ್ ನಲ್ಲಿ ಕಾಣಿಸಿಕೊಂದಿದ್ದು, ಸಿನಿಮಾದ ಹಾಡು ಹಾಗೂ ಟೀಸರ್, ಟ್ರೈಲರ್ ಈಗಾಗಲೇ ಭಾರತ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದಿದಂತೆ ಆಗಿದೆ.  ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಆನ್ಲೈನ್ ಲೀಕ್ ಆಗಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ  ಮಾಡುತ್ತಿದ್ದು ಈ ಬಗ್ಗೆ ಸಿನಿಮಾ ತಂಡವೇ ಖಚಿತ ಮಾಡಬೇಕಿದೆ..

Edited By

Manjula M

Reported By

Manjula M

Comments