ಬೆಳ್ಳಂದೂರು ಕೆರೆಯ ಬಳಿ ರಶ್ಮಿಕಾ ಮಂದಣ್ಣ ಏನ್ ಮಾಡ್ತಿದ್ದಾರೆ..?!

15 Dec 2018 2:27 PM | Entertainment
244 Report

ಬೆಂಗಳೂರಿನಲ್ಲಿರುವ  ಕೆರೆಗಳು ಎಷ್ಟು ಕಲುಷಿತಗೊಂಡಿವೆ  ಮಲೀನದಿಂದ ಕೂಡಿವೆ ಎಂದು ತಿಳಿಯಬೇಕಾದರೆ ಬೆಳಂದೂರು ಕೆರೆ ನೋಡಿದರೆ ಸಾಕು. ಬೆಳಂದೂರು ಕೆರೆಯ ಆತಂಕಕಾರಿ ಸ್ಥಿತಿಯ ಬಗ್ಗೆ ರಾಷ್ಟ್ರಮಟ್ಟದಲ್ಲೇ ಸಾಕಷ್ಟು ಚರ್ಚೆಗಳಾಗಿತ್ತು. ನೊರೆ ಯಾವಾಗಲೂ ಕಾಣಿಸಿಕೊಳ್ಳುತ್ತಲೆ ಇರುತ್ತದೆ.

ಇದೀಗ ಆ ವಿಷಕಾರಿ ನೊರೆ ಹೊರಹಾಕುವ ಕೆರೆಯ ಪಕ್ಕದಲ್ಲೇ ರಶ್ಮಿಕಾ ಮಂದಣ್ಣ ಫೋಟೋ ಶೂಟ್’ವೊಂದನ್ನು ಮಾಡಿಸಿದ್ದಾರೆ. ರಶ್ಮಿಕಾಗೆ  ಇಲ್ಲೇನು ಕೆಲಸ ಅಂತ ಯೋಚನೆ ಮಾಡುತ್ತಿದ್ಧೀರಾ..? ಕೆರೆಗಳ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಫೋಟೋ ಶೂಟ್ ಒಂದರಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಸನ್ಮತಿ ಪ್ರಸಾದ್ ಎಂಬವರು ಈ ಫೋಟೋ ಶೂಟ್ ನ ನಿರ್ದೇಶಕರಾಗಿದ್ದು ಈ ಫೋಟೋ ಶೂಟ್ ನ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ರಶ್ಮಿಕಾ ಕೆರೆಯ ಸ್ಥಿತಿ ನೋಡಿ ನಿಜಕ್ಕೂ ದುಃಖವಾಯಿತು ಎಂದು ಬರೆದುಕೊಂಡಿದ್ದಾರೆ.ಇನ್ನೂ ಮುಂದಾದರೂ ಕೆರೆಯ ಅಭಿವೃದ್ಧಿಯತ್ತ ಗಮನ ಹರಿಸಬೇಕು..

Edited By

Manjula M

Reported By

Manjula M

Comments