ಜೋಗಿ ಪ್ರೇಮ್’ಗೆ ಎದುರಾಯ್ತು ಮತ್ತೊಂದು ಸಂಕಷ್ಟ..!!

15 Dec 2018 9:31 AM | Entertainment
179 Report

ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧ ಪಟ್ಟಂತೆ ಗುರುವಾರ ವಾಗ್ವಾದ ನಡೆದಿದೆ. ಇಬ್ಬರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಬೆಂಗಳೂರಿನ ಚಂದ್ರಲೇಔಟ್‌ನಲ್ಲಿರುವ ಪ್ರೇಮ್‌ ಮನೆ ಮುಂದೆ ಗುರುವಾರ ಸಂಜೆ ಈ ಗಲಾಟೆ ನಡೆದಿದೆ.

ಪುನೀತ್‌ ರಾಜ್‌ಕುಮಾರ್‌ ನಟನೆಯ 'ರಾಜ್‌' ಸಿನಿಮಾ ನಂತರ ಕನಕಪುರ ಶ್ರೀನಿವಾಸ್‌ ಅವರಿಗೆ ಸಿನಿಮಾ ಮಾಡಿಕೊಡುವುದಕ್ಕಾಗಿ 9 ಲಕ್ಷವನ್ನು ಶ್ರೀನಿವಾಸ್‌ ಅವರಿಂದ ಪ್ರೇಮ್‌ ಮುಂಗಡವಾಗಿ ಪಡೆದಿದ್ದರು. ಈ ಪೈಕಿ .4 ಲಕ್ಷ ನಗದು ರೂಪದಲ್ಲಿ, 5 ಲಕ್ಷಗಳ ಚೆಕ್‌ ನೀಡಲಾಗಿತ್ತು.ನಆದರೆ, ತಮಗೆ ಪ್ರೇಮ್‌ ಸಿನಿಮಾನೂ ಮಾಡಿಕೊಟ್ಟಿಲ್ಲ, ಮುಂಗಡ ಹಣವೂ ವಾಪಸ್ಸು ನೀಡಿಲ್ಲ ಎಂದು ಕನಕಪುರ ಶ್ರೀನಿವಾಸ್‌ ಅವರು ಆರೋಪ ಮಾಡಿದ್ದಾರೆ. ಈ ವಿಷಯವಾಗಿ ಪ್ರೇಮ್ ವಾಣಿಜ್ಯಮಂಡಳಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ..

Edited By

Manjula M

Reported By

Manjula M

Comments