‘ಗೋರಿ’ಯ ಮೇಲೆ… ಪ್ರೀತಿಯ ಸಮಾಧಿ ಕಟ್ಟಲು ಬಂದ ಉತ್ತರ ಕರ್ನಾಟಕದ ಹುಡುಗ..!!

14 Dec 2018 3:23 PM | Entertainment
489 Report

 ಬಣ್ಣದ ಲೋಕ ಅಂದ್ರೇನೆ ಹಾಗೆ.. ಎಲ್ಲರನ್ನೂ ಕೈ ಬೀಸಿ ಕರೆಯುತ್ತಿರುತ್ತದೆ. ಆದರೆ ಬಂದವರೆಲ್ಲಾ ನೆಲೆ ಕಟ್ಟಿಕೊಳ್ತಾರೆ ಅನ್ನೋದು ಸುಳ್ಳು..ಸಿನಿಮಾದಲ್ಲಿ ನಟಿಸಲು ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತಾರೆ.. ಇದೆ ರೀತಿ ಹಾವೇರಿಯ ಒಬ್ಬ ಹುಡುಗ ಸಿನಿಮಾ ಕನಸು ಕಾಣುತ್ತಿದ್ದನು.. ಇದೀಗ ಆತನ ಕನಸು ನನಸಾಗಿದೆ.

ಅದೇ ಸಾಲಿಗೆ ಸೇರುವ ಹುಡುಗ ಉತ್ತರ ಕರ್ನಾಟಕದ ಖಡಕ್ ಹುಡುಗ ಕಿರಣ್.. ಕನ್ನಡದ ಸುದ್ದಿ ವಾಹಿನಿಯಲ್ಲಿ ವರದಿಗಾರನಾಗಿ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಇಂದು ನಾಯಕ ನಟನಾಗಿದ್ದಾರೆ. ಅವರ ಮೊದಲ ಸಿನಿಮಾ 'ಗೋರಿ' ನಿನ್ನೆ ಅಷ್ಟೆ ಸಂಪಂಗಿರಾಮ ನಗರದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮವು ನಡೆದಿದೆ. ಕಿರಣ್ ಹೀರೋ ಆಗಬೇಕು ಎನ್ನುವುದು ಕಿರಣ್ ತಾಯಿಯ ಕನಸು.. ತಾಯಿಯ ಕನಸನ್ನು ನನಸು ಮಾಡುತ್ತಿರುವ ಖುಷಿಯಲ್ಲಿದ್ದಾರೆ ನಟ ಕಿರಣ್. ಈ ಸಿನಿಮಾಕ್ಕೆ ನಿರ್ದೇಶಕ ಗೋಪಾಲ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಸಿನಿಮಾಗೆ ಜಿತೇಂದ್ರ ಬಂಡವಾಳ ಹೂಡುತ್ತಿದ್ದು, ಶ್ವೇತಾ ಕಿರಣ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಗೋರಿ ಸಿನಿಮಾದಲ್ಲಿ ನಾಯಕ ನಟ ಕಿರಣ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ರಹೀಮನ ಪಾತ್ರದಲ್ಲಿ ನಟ ಅಮಿತ್ ಅಭಿನಯಿಸಲಿದ್ದಾರೆ. ಜನವರಿಯಲ್ಲಿ ಚಿತ್ರದ ಚಿತ್ರಿಕರಣ ಪ್ರಾರಂಭವಾಗಲಿದೆ.

Edited By

Manjula M

Reported By

Manjula M

Comments