ಕೆಜಿಎಫ್’ಗೆ 'ಆಲ್ ದ ಬೆಸ್ಟ್' ಹೇಳಿದ ಶಾರುಕ್ ಖಾನ್

14 Dec 2018 2:00 PM | Entertainment
114 Report

ಸ್ಯಾಂಡಲ್’ವುಡ್ ನ ಬಹುನೀರಿಕ್ಷಿತ ಸಿನಿಮಾದ ಕೆಜಿಎಫ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕೆಜಿಎಫ್' ಡಿಸೆಂಬರ್ 21ರ ಶುಕ್ರವಾರದಂದು ಬಿಡುಗಡೆಯಾಗುತ್ತಿದೆ. ಮೇಕಿಂಗ್ ನಿಂದಲೇ ಭಾರತೀಯ ಚಿತ್ರರಂಗದ ಸಾಕಷ್ಟು ಗಮನ ಸೆಳೆದಿರುವ ಈ ಚಿತ್ರದ ಕುರಿತು ಸಿನಿ ಪ್ರೇಕ್ಷಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ..

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಅನ್ನು ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ. ಡಿಸೆಂಬರ್ 21ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಜೊತೆಗೆ ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಅಭಿನಯದ 'ಜೀರೋ' ಚಿತ್ರ ಕೂಡ ತೆರೆಗೆ ಬರಲಿದೆ. ಈ ಎರಡು ಚಿತ್ರಗಳ ಪೈಕಿ 'ಕೆಜಿಎಫ್' ಒಂದು ಕೈ ಮೇಲು ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಶಾರುಕ್ ಖಾನ್ ಕೂಡ ಕೆಜಿಎಫ್ ಕುರಿತು ಒಳ್ಳೆಯ ಮಾತುಗಳನ್ನು ಆಡಿಕೊಂಡಿದ್ದಾರೆ. ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.

Edited By

Manjula M

Reported By

Manjula M

Comments