ಪವರ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ..! ನಟಸಾರ್ವಭೌಮ ಸಾಂಗ್ ಬಿಡುಗಡೆ..!?

14 Dec 2018 9:33 AM | Entertainment
242 Report

ಸ್ಯಾಂಡಲ್ ವುಡ್ ನಲ್ಲಿ ವರ್ಷಾದ್ಯಾಂತದಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ. ಅದರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಕೂಡ ಒಂದು.. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.  ನಟ ಸಾರ್ವಭೌಮ ಚಿತ್ರದ ಹಾಡುಗಳು ಶೀಘ್ರದಲ್ಲೇ ಬಿಡುಗಡೆಯಾಲಿವೆ ಎಂದಿದ್ದಾರೆ.

ಎಸ್.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ನಟ ಸಾರ್ವಭೌಮ ಚಿತ್ರ ಶೂಟಿಂಗ್ ಮುಗಿಸಿ ಡಬ್ಬಿಂಗ್ ಕೂಡ ಮುಗಿಸಿದ್ದು, ಚಿತ್ರತಂಡ ಇದೀಗ ಸಾಂಗ್ ರಿಲೀಸ್ ಮಾಡುವ ಆಲೋಚನೆಯನ್ನು ಮಾಡುತ್ತಿದೆ. ನಟ ಸಾರ್ವಭೌಮ ಚಿತ್ರದ ಹಾಡುಗಳು on tha way ಇದೆ ಎಂದು ಚಿತ್ರತಂಡ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ. ಈ ಚಿತ್ರದಲ್ಲಿ ಪುನೀತ್ ಗೆ ಜೋಡಿಯಾಗಿ ಅನುಪಮಾ ಪರಮೇಶ್ವರನ್ ಹಾಗು ರಚಿತಾ ರಾಮ್ ನಟಿಸಿದ್ದಾರೆ.ಒಟ್ಟಾರೆ ಸಿನಿ ರಸಿಕರು ಈ ವರ್ಷದ ಕೊನೆಯಲ್ಲಿ ಒಳ್ಳೆಯ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದು.

Edited By

Manjula M

Reported By

Manjula M

Comments