ಕಣ್ಸನ್ನೆಯ ಹುಡುಗಿ ಈಗ ನಂ.1 ಸೆಲೆಬ್ರಿಟಿ..!

13 Dec 2018 9:59 AM | Entertainment
356 Report

ಕಣ್ಸನ್ನೆಯ ಹುಡುಗಿ ಅಂದರೆ ಎಲ್ಲರಿಗೂ ನೆನಪಾಗೋದು ಪ್ರಿಯಾ ವಾರಿಯರ್.. ಒಂದೆ ಒಂದು ರಾತ್ರಿಗೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಈಕೆ.. ಓರು ಅಡಾರ್‌ ಲವ್‌ ಎಂಬ ಮಲಯಾಳಂ ಚಿತ್ರದ ಹಾಡೋಂದರಲ್ಲಿ ಕಣ್ಣು ಮಿಟುಕಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದ ನಟಿ ಪ್ರಿಯಾ ವಾರಿಯರ್‌, ಭಾರತದಲ್ಲಿ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಗೂಗಲ್‌ ವರ್ಷದ ಶೋಧಿಸಲಾದ ವ್ಯಕ್ತಿಗಳಲ್ಲಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್‌ ಜೋನ್ಸ್‌ ಎರಡನೇ ಸ್ಥಾನ ಪಡೆದಿದ್ದು, ಬಿಗ್‌ ಬಾಸ್‌ ಸ್ಪರ್ಧಿ ಸ್ಪಪ್ನಾ ಚೌಧರಿ ನಂತರದ ಸ್ಥಾನದಲ್ಲಿದ್ದಾರೆ. ಇದೇ ವೇಳೆ ವಿಷಯಾಧಾರಿತ ಗೂಗಲ್‌ ಶೋಧದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ, ಐಪಿಎಲ್‌- 2018 ಹಾಗೂ ಬಿಗ್‌ ಬಾಸ್‌ ಕುರಿತ ಶೋಧಗಳು ಮೊದಲ ಸ್ಥಾನದಲ್ಲಿದ್ದಾರೆ.

Edited By

Manjula M

Reported By

Manjula M

Comments