ಮೀಟೂ ವಿವಾದದ ನಂತರ ಶೃತಿ ಹರಿಹರನ್’ಗೆ ಆಫರ್ ಇಲ್ವಂತೆ..!!

12 Dec 2018 3:24 PM | Entertainment
175 Report

ಮೀಟೂ ಅಭಿಯಾನದ ಸದ್ದು ಯಾಕೋ ಸೈಲೆಂಟ್ ಆದ ಆಗಿದೆ.. ಸ್ಯಾಂಡಲ್ ವುಡ್ ನಲ್ಲಿ ಮೀಟೂ ಸಖತ್ತಾಗಿಯೇ ಸದ್ದು ಮಾಡಿತ್ತು… ಅದರಲ್ಲಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ದ ಮೀಟೂ ಕೇಸ್ ಹಾಕಿದ್ದರು.. ನಂತರ ಅದ್ಯಾಕೋ ಅದರ ಸದ್ದುಗಳೇ ಕೇಳಿಸುತ್ತಿಲ್ಲ.. ಶೃತಿ ಹರಿಹರನ್ ಕೆಲವು ತಿಂಗಳುಗಳ ಹಿಂದೆ ವಾರಕ್ಕೆ ಮೂರು ಸಿನಿಮಾ ಆಫರ್‌ಗಳು ಬರುತ್ತಿದ್ದವು. ಆದರೆ ಈಗ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ ಎಂದು ಮಾಧ್ಯಮಗಳ ಜೊತೆ ಚರ್ಚಿಸಿದ್ದಾರೆ.

ಸಿನಿಮಾ ಆಫರ್ಗಳು ಬರುವುದು ಕಡಿಮೆಯಾಗಿದೆ. ಬಹುಶಃ ಅನೇಕರು ಇನ್ನು ನನ್ನ ಜೊತೆ ಯಾವತ್ತೂ ಕೆಲಸ ಮಾಡುವುದಿಲ್ಲ ಅನ್ನಿಸುತ್ತಿದೆ. ನನ್ನ ಜೊತೆ ಕೆಲಸ ಮಾಡಲು ಇಚ್ಛೆ ಇರುವ ನಿರ್ದೇಶಕರು ಇನ್ನೂ ಬರವಣಿಗೆ ಹಂತದಲ್ಲಿದ್ದಾರೆ. ನಾನು ಕೆಲವರ ದ್ವೇಷ ಕಟ್ಟಿಕೊಳ್ಳುತ್ತೇನೆ ಅನ್ನುವುದು ಗೊತ್ತಿತ್ತು. ಇದರಲ್ಲಿ ಸರ್ಪೈಸ್ ಏನೂ ಇಲ್ಲ. ನಾನು ಇದನ್ನೆಲ್ಲಾ ಒಪ್ಪಿಕೊಂಡೇ ನನ್ನ ಹೋರಾಟ ಮುಂದುವರಿಸುತ್ತೇನೆ ಎಂದು ಶೃತಿ ಹರಿಹರನ್ ತಿಳಿಸಿದ್ದಾರೆ.

 

Edited By

Manjula M

Reported By

Manjula M

Comments