‘ದಾರಿ ತಪ್ಪಿದ ಮಗ’ನಿಗೆ  ಜೊತೆಯಾಗಲಿರುವ ಮಾನ್ವಿತಾ ಕಾಮತ್..?

11 Dec 2018 5:41 PM | Entertainment
164 Report

ಸ್ಯಾಂಡಲ್ ವುಡ್ ನಲ್ಲಿ ಹೀರೋ ಮಕ್ಕಳು ಕೆಲವರು ಹೀರೋ ಆಗಿ ಎಂಟ್ರಿ ಕೊಡ್ತಾರೆ.. ಮತ್ತೆ ಕೆಲವರು ವಿಲನ್ ಆಗಿ ಎಂಟ್ರಿ ಕೊಡ್ತಾರೆ. ಆದರೆ ಇದೀಗ ಹಿರಿಯ ನಟ ರಾಮ್ ಕುಮಾರ್ ಪುತ್ರ ಧೀರೇನ್ ರಾಜ್ ಕುಮಾರ್ ಚೊಚ್ಚಲ ಅಭಿನಯದ ದಾರಿ ತಪ್ಪಿ ಮಗ ಸಿನಿಮಾ ಗಾಂಧಿ ನಗರದಲ್ಲಿ ಸಾಕಷ್ಚು ಸುದ್ದಿ ಮಾಡುತ್ತಿದೆ.  ಧೀರೇನ್ ರಾಜ್ ಕುಮಾರ್ ಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ನಟಿಸಲಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.

1975 ರಲ್ಲಿ ತೆರೆಕಂಡ ದಾರಿ ತಪ್ಪಿದ ಮಗ ಸಿನಿಮಾದಲ್ಲಿ ಧಿರೇನ್ ತಾತ ಡಾ.ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದರು. ಜಯಣ್ಣ ಕಂಬೈನ್ಸ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಹಲವು ಹೀರೋಯಿನ್ ಗಳ ಹೆಸರು ಕೇಳಿ ಬಂದಿತ್ತು,. ಆ ಪಾತ್ರಕ್ಕೆ ಮಾನ್ವಿತಾ ಸೂಕ್ತ ಎಂದು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಮಾನ್ವಿತಾ ಜೊತೆ ಕೆಲ ಸುತ್ತಿನ ಮಾತುಕತೆಗಳು ಮುಗಿದಿವೆ, ಇನ್ನೂ ಸಹಿ ಮಾಡುವುದೊಂದೇ ಬಾಕಿ ಎನ್ನಲಾಗಿದೆ. ಧಿರೇನ್ಗೆ ಈ ಸಿನಿಮಾ ಒಳ್ಳೆ ಬ್ರೇಕ್ ಕೊಟ್ಟರೆ ಸ್ಯಾಂಡಲ್ ವುಡ್ ನ ಭರವಸೆಯ ನಾಯಕ ಆಗುವುದರಲ್ಲಿ ನೋ ಡೌಟ್

 

Edited By

Manjula M

Reported By

Manjula M

Comments