ಚೆಕ್ ಬೌನ್ಸ್ ಪ್ರಕರಣ : ಜೈಲಿಗೆ ಹೋಗುವ ಸಂಕಷ್ಟದಲ್ಲಿ ನಟ, ನಿರ್ಮಾಪಕ ದ್ವಾರಕೀಶ್

11 Dec 2018 12:00 PM | Entertainment
614 Report

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ದೂರಿನ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದ್ವಾರಕೀಶ್ ಅವರ ವಿರುದ್ಧ ತೀರ್ಪು ನೀಡಿದೆ. ನಿರ್ಮಾಪಕರಾದ ಕೆಸಿಎನ್ ಚಂದ್ರಶೇಖರ್ ಕೊಟ್ಟ ದೂರಿನ ಅನುಸಾರ 21ನೇ ಎಸಿಎಂಎಂ ನ್ಯಾಯಾಲಯವು ಸೋಮವಾರ ವಿಚಾರಣೆ ನಡೆಸಿದೆ ಎನ್ನಲಾಗುತ್ತಿದೆ.

ಕೆಸಿಎನ್ ಚಂದ್ರಶೇಖರ್ ಅವರಿಗೆ ಬಾಕಿ ಮೊತ್ತ ಪಾವತಿಸುವಂತೆ ಆದೇಶ ನೀಡಿದೆ. ಒಂದು ವೇಳೆ ಹಣ ನೀಡಲು ತಪ್ಪಿದ್ದಲ್ಲಿ 1 ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ. ಪ್ರಿಯಾಮಣಿ ಅಭಿನಯದ 'ಚಾರುಲತಾ' ಚಿತ್ರದ ನಿರ್ಮಾಣಕ್ಕಾಗಿ ದ್ವಾರಕೀಶ್ ರು.50 ಲಕ್ಷ ಸಾಲ ಪಡೆದಿದ್ದರಂತೆ. ಈ ಸಂಬಂಧ ಅವರು ಆಂಧ್ರ ಬ್ಯಾಂಕ್ ನ ರು.52 ಲಕ್ಷದ ಚೆಕ್ ಕೆಸಿಎನ್ ಚಂದ್ರಶೇಖರ್ ಅವರಿಗೆ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದೆ ಎಂದು ಚಂದ್ರಶೇಖರ್ ಕೋರ್ಟ್ ಮೆಟ್ಟಿಲೇರಿದ್ದರು.

Edited By

Manjula M

Reported By

Manjula M

Comments