ಗಂಡ-ಹೆಂಡತಿಯರಾದ ನೀರ್ ದೋಸೆ ಬೆಡಗಿ ಹರಿಪ್ರಿಯಾ-ಸೃಜನ್ ಲೋಕೇಶ್..!

11 Dec 2018 10:34 AM | Entertainment
180 Report

ಸ್ಯಾಂಡಲ್ ವುಡ್ ನ ಟಾಕಿಂಗ್ ಸ್ಟಾರ್ ನಟ ಸೃಜನ್ ಲೋಕೇಶ್ ಸ್ವಲ್ಪ ದಿನದಿಂದ  ಚಿತ್ರರಂಗದಿಂದ ದೂರವೇ ಉಳಿದಿದ್ದರು.. ಆದರೆ ಈಗ ಮತ್ತೆ ‘ಎಲ್ಲಿದ್ದೆ ಇಲ್ಲಿ ತನಕ’ ಎಂಬ ಸಿನಿಮಾದ ಮೂಲಕ ನಟರಾಗಿ ರೀ ಎಂಟ್ರಿ ಕೊಡುತ್ತಿದ್ದಾರೆ.. ಈ ಸಿನಿಮಾದಲ್ಲಿ ಸೃಜನ್ ಅವರಿಗೆ ನಟಿ ಹರಿಪ್ರಿಯಾ ಅವರು ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ. ನಟ ಸೃಜನ್ ಮತ್ತು ನಟಿ ಹರಿಪ್ರಿಯಾ ಅವರು ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಇವರಿಬ್ಬರು ಪತಿ-ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನೆನ್ನೆ ಅಷ್ಟೆ ಈ ಸಿನಿಮಾದ ಮುಹೂರ್ತ ಆಗಿದ್ದು, ಈ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್, ದರ್ಶನ್, ನಟಿ ತಾರಾ ಹಾಗೂ ಪ್ರಿಯಾಂಕ ಉಪೇಂದ್ರ ಅವರು ಕೂಡ ಭಾಗಿಯಾಗಿದ್ದರು.ಈ ಸಿನಿಮಾವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಶೋ ನಿರ್ದೇಶಕ ತೇಜಸ್ವಿ ಅವರೇ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಸಿನಿಮಾಕ್ಕಾಗಿ ಸೃಜನ್ ಮತ್ತು ಹರಿಪ್ರಿಯಾ ಫೋಟೋ ಶೂಟ್ ಮಾಡಿಸಿದ್ದು, ಇವರಿಬ್ಬರು ಗಂಡ ಹೆಂಡತಿಯಂತೆ ಸಖತ್ತಾಗಿಯೇ ಪೋಸ್ ಕೊಟ್ಟಿದ್ದಾರೆ.

Edited By

Manjula M

Reported By

Manjula M

Comments