ಯಶ್ ಕೆಜಿಎಫ್ ಸಿನಿಮಾದ ಮೇಕಿಂಗ್​ ವಿಡಿಯೋ ರಿಲೀಸ್

10 Dec 2018 1:57 PM | Entertainment
658 Report

ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಸಿನಿಮಾವಾದ ಕೆಜಿಎಫ್ ಸಿನಿಮಾವು ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ತೆರೆ ಕಾಣುವುದಕ್ಕೆ ಸಿದ್ದವಾಗಿರುವ ನಟ ಯಶ್ ಅವರ ಬಹು ನೀರಿಕ್ಷೆಯ ಸಿನಿಮಾ ಕೆಜಿಎಫ್​ ಚಿತ್ರದ ಎರಡು ಟ್ರೇಲರ್​ ಹಾಗೂ ಲಿರಿಕಲ್ ವಿಡಿಯೋವೊಂದ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಕ್ರಿಯೆಟ್ ಮಾಡಿದೆ.  

ನಡುವೆ ಕೆಜಿಫ್ಸಿನಿಮಾದ ಬಿಡುಗಡೆಯ ದಿನಕ್ಕಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿರುವ ಸಮಯದಲ್ಲಿಯೇ , ಕೆಜಿಎಫ್ಗಣಿ ಪ್ರದೇಶದಲ್ಲಿ ಶೂಟ್ಮಾಡಲಾಗಿರುವ ವಿಡಿಯೋವನ್ನು ಸಿನಿಮಾ ತಂಡ ಬಿಡುಗಡೆ ಮಾಡಿದ್ದು ನಟ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇನ್ನೂ ಚಿತ್ರ ತೆರೆ ಮೇಲೆ ಯಾವ ರೀತಿ ಕಾಣಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments