'ಗಾಳಿಪಟ' ಚಿತ್ರದ ಸಿಕ್ವೇಲ್‌ ಗೆ ತಯಾರಿ ನಡೆಸ್ತಿದ್ದಾರೆ ಯೋಗರಾಜ್ ಭಟ್..!! ನಾಯಕರು ಯಾರ್ ಗೊತ್ತಾ..?

06 Dec 2018 1:21 PM | Entertainment
227 Report

ಸ್ಯಾಂಡಲ್ ವುಡ್ ಗೆ ಒಂದೊಳ್ಳೆ ಬ್ರೇಕ್ ಕೊಟ್ಟ ಸಿನಿಮಾಗಳಲ್ಲಿ ಗಾಳಿಪಟ ಸಿನಿಮಾ ಕೂಡ ಒಂದು..2008 ರಲ್ಲಿ ತೆರೆಕಂಡು ಸಿನಿಪ್ರೇಮಿಗಳನ್ನು ರಂಜಿಸಿದ್ದ 'ಗಾಳಿಪಟ' ಚಿತ್ರದ ಸಿಕ್ವೇಲ್‌ ಸಿನಿಮಾ ಮಾಡಲು ಯೋಗರಾಜ್ ಭಟ್ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಹಿಂದಿನ ಚಿತ್ರದಲ್ಲಿ ಗಣೇಶ್‌, ದಿಗಂತ್‌, ರಾಜೇಶ್‌ ಕೃಷ್ಣನ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..

ಆದರೆ ಗಾಳಿಪಟ ಹೊಸ ಸಿನಿಮಾದ ಸಿಕ್ವೆಲ್’ನಲ್ಲಿ ಅವರ ಬದಲು ಬೇರೆ ಕಲಾವಿದರು ಅಭಿನಯಿಸಲಿದ್ದಾರೆ.. ಶರಣ್‌, ಆಪರೇಷನ್‌ ಅಲಮೇಲಮ್ಮ ಖ್ಯಾತಿಯ ರಿಷಿ ಮತ್ತು ನಿರ್ದೇಶಕ ಲೂಸಿಯಾ ಪವನ್‌ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. 'ಗಾಳಿಪಟ ಚಿತ್ರದ ಸೀಕ್ವಲ್ ಗೆ ಕಥೆ ಅಂತಿಮವಾಗಿದೆ. ಚಿತ್ರಕಥೆ ಮಾಡುತ್ತಿದ್ದೇನೆ. ಉಳಿದಂತೆ ಬೇರೆಲ್ಲಾ ಕೆಲಸಗಳು ನಡೆಯುತ್ತಿದೆ.ಪಂಚತಂತ್ರ ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ, ಹೊಸ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ಸದ್ಯಕ್ಕೆ ಹಂಚಿಕೊಳ್ಳಲಾರೆ' ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ.

Edited By

Manjula M

Reported By

Manjula M

Comments