'ಸೀತಾರಾಮ ಕಲ್ಯಾಣ' ಸಿನಿಮಾ ರಿಲೀಸ್ ಆಗೋದು ಯಾವಾಗ ಗೊತ್ತಾ..!?

05 Dec 2018 11:02 AM | Entertainment
46 Report

ಚಂದನವನದಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿರುವ ನಿಖಿಲ್ ಕುಮಾರ್ ಹಾಗೂ ಡಿಂಪಲ್ ಕ್ವೀನ್ ರಚಿತರಾಮ್  ನಟನೆಯ 'ಸೀತಾರಾಮ ಕಲ್ಯಾಣ' ಚಿತ್ರ ಸೆಟ್ಟೇರಿದಾಗಿನಿಂದಲೂ ಸಖತ್ ಸದ್ದು ಮಾಡುತ್ತಿದೆ.. ಸ್ಯಾಂಡಲ್ವುಡ್ ನಲ್ಲಿ ದಾಖಲೆಯನ್ನು ಬರೆಯುವತ್ತ ಮುಖ ಮಾಡಿದೆ ಅನ್ನೋದು ಚಿತ್ರರಂಗದ ಮಾತಾಗಿದೆ.

ಎ.ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಸೀತಾರಾಮಕಲ್ಯಾಣ’ ಚಿತ್ರ ಈಗಾಗಲೇ ಸಾಕಷ್ಟು ಭರವಸೆಯನ್ನು ಹಾಗು ನಿರೀಕ್ಷೆಯನ್ನು ಹುಟ್ಟಿಸಿದ್ದು, ಚಿತ್ರದ ಟೀಸರ್ ಗೆ ಸಿನಿ ರಸಿಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾ ಕೂಡ ಜನವರಿ ತಿಂಗಳಿನಲ್ಲಿ ತೆರೆ ಕಾಣಲಿದೆಯಂತೆ. ರವಿಶಂಕರ್, ಆದಿತ್ಯ ಮೆನನ್, ಮಧುಬಾಲ, ಜ್ಯೋತಿ ರೈ, ಗಿರಿಜಾ ಲೋಕೇಶ್, ಚಿಕ್ಕಣ್ಣ, ಸಾಧು ಕೋಕಿಲ, ಕುರಿ ಪ್ರತಾಪ್, ಶಿವರಾಜ್ ಕೆ ಆರ್ ಪೇಟೆ, ಶಾಲಿನಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Edited By

Manjula M

Reported By

Manjula M

Comments