ಸುದೀಪ್ ವಾರ್ನ್ ಕೊಟ್ಟರೂ ಸುಮ್ಮನಿರದ ಬಿಗ್ ಬಾಸ್ ಲವ್ ಬರ್ಡ್ಸ್...!!!

04 Dec 2018 5:27 PM | Entertainment
62 Report

ಬಿಗ್ ಬಾಸ್ ಸಿಸನ್-6 ಆರಂಭವಾದಗಿನಿಂದಲೂ ದಿನದ ಎಪಿಸೋಡ್ ಗಳು ಬಹಳ ಕುತೂಹಲಕಾರಿ ಸೃಷ್ಟಿಸಿವೆ. ಈ ನಡುವೆ ಬಿಗ್ ಮನೆಯಲ್ಲಿ ಲವ್ ಬರ್ಡ್ಸ್ ಗಳ ಕುಚು-ಕುಚು ಹೆಚ್ಚಾಗುತ್ತಿದೆ ಎನ್ನುವುದು ಬಿಗ್ ಬಾಸ್ ಅಭಿಮಾನಿಗಳ ಮಾತು. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಮತ್ತು ಅಕ್ಷತಾ ನಡುವಿನ 'ಅತಿ ಆತ್ಮೀಯ' ಗೆಳೆತನ 'ಬಿಗ್ ಬಾಸ್' ಮನೆಯಲ್ಲಿ ಇರುವವರಿಗೆ ಮಾತ್ರ ಅಲ್ಲ.. ವೀಕ್ಷಕರಿಗೂ ಕಿರಿಕಿರಿ ತಂದಿದೆ. ಹೀಗಾಗಿ, ಇವರಿಬ್ಬರನ್ನೂ ಹೊರಗೆ ಹಾಕಿ ಅಂತ ವೀಕ್ಷಕರು ಮೊದಲಿನಿಂದಲೂ 'ಬಿಗ್ ಬಾಸ್' ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮಾತು-ಕತೆ  ಜೋರಾಗಿದೆ.

ಕಳೆದ ವಾರವಂತೂ ರಾಕೇಶ್-ಅಕ್ಷತಾ 'Intense ಫ್ರೆಂಡ್ ಶಿಪ್' ಮ್ಯಾಟರ್ 'ಬಿಗ್ ಬಾಸ್' ಮನೆಯಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ರಿಂದ, ಯಾರಿಗೂ ಕೆಟ್ಟ ಹೆಸರು ಬರಬಾರದು ಎಂಬ ಕಾರಣಕ್ಕೆ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಸೂಕ್ಷ್ಮವಾಗಿ ಪರಿಹಾರ ನೀಡಲು ಮುಂದಾದರು. ಇವರಿಬ್ಬರ  ಸಂಬಂಧದ ಬಗ್ಗೆ ಅವರಿಗೆ ತಿಳಿಸುವ ನಿಟ್ಟಿನಲ್ಲಿ  ತಿಳುವಳಿಕೆ ಕೂಡ ಹೇಳಿದ್ರು ಆದ್ರೆ, ಸುದೀಪ್ ಸೂಕ್ಷ್ಮವಾಗಿ ಹೇಳಿದ್ದು 'ಅತಿ ಬುದ್ಧಿವಂತ' ರಾಕೇಶ್ ಮತ್ತು ಅಕ್ಷತಾಗೆ ಅರ್ಥ ಆಗಲಿಲ್ಲ. ವಿವಾದದ ಗಾಂಭೀರ್ಯತೆಯ ಅರಿವು ಕೂಡ ಅವರಿಬ್ಬರಿಗೆ ಇಲ್ಲ.ತಾವು ಆಡಿದ ಮಾತುಗಳಿಗೆ ಬದ್ಧವಾಗಿ ನಿಲ್ಲದೆ, ಸುದೀಪ್ ಮಾತುಗಳನ್ನು ಅರ್ಥೈಸದೇ, ಸುದೀಪ್ ಗೆ ಅಗೌರವ ತೋರಿದ ರಾಕೇಶ್ ಮತ್ತು ಅಕ್ಷತಾ ವಿರುದ್ಧ ವೀಕ್ಷಕರು ಕೋಪಿಸಿಕೊಂಡಿದ್ದಾರೆ. ರಾಕೇಶ್ ಮತ್ತು ಅಕ್ಷತಾ ಬಗ್ಗೆ ಮುನಿಸಿಕೊಂಡು ವೀಕ್ಷಕರು ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ಕಾಮೆಂಟ್ ಮಾಡುತ್ತಿದ್ದಾರೆ.

 

Sponsored

Edited By

Manjula M

Reported By

Manjula M

Comments