ಪದ್ಮಾವತಿಗೆ ಊಟದ ಬೇಡಿಕೆ ಇಟ್ಟ ತುಪ್ಪದ ಬೆಡಗಿ..!

01 Dec 2018 11:14 AM | Entertainment
254 Report

ಸ್ಯಾಂಡಲ್ ವುಡ್ ನ ಪದ್ಮಾವತಿ ಹಾಗೂ ಮಾಜಿ ಸಂಸದೆಯಾದ ರಮ್ಯಾ ಗುರುವಾರದಂದು ತಮ್ಮ ಬರ್ತ್ ಡೇಯನ್ನಯ ಆಚರಿಸಿಕೊಂಡಿದ್ದು, ರಮ್ಯಾ ಸದ್ಯ ಎಲ್ಲಿದ್ದಾರೆಂಬುದರ ಕುರಿತು ಯಾರಿಗೂ ತಿಳಿದಿಲ್ಲ..ರಮ್ಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಪೋಸ್ಟ್ ಹಾಕಿದ್ದು, ಟ್ವಿಟರ್ ನಲ್ಲಿ ಶುಭ ಕೋರಿರುವ ತುಪ್ಪದ ಬೆಡಗಿ ರಾಗಿಣಿ, ಬೆಂಗಳೂರಿಗೆ ಬಂದು ಪಾರ್ಟಿ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾರೆ.

ರಾಗಿಣಿ ಅವರ ಶುಭಾಶಯಕ್ಕೆ ಧನ್ಯವಾದ ಎಂದು ಪ್ರತಿಕ್ರಿಯಿಸಿರುವ  ರಮ್ಯಾ ಪಾರ್ಟಿ ಕೊಡಿಸುವ ಕುರಿತು ಯಾವುದೇ ಉತ್ತರ ನೀಡಿಲ್ಲ. ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ರಮ್ಯಾ ಬಂದಿಲ್ಲವೆಂಬ ಕಾರಣಕ್ಕೆ ಅಂಬರೀಶ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರಮ್ಯಾ, ಚಿಕಿತ್ಸೆ ಪಡೆದುಕೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾರೆಂಬ ಮಾತುಗಳೂ ಕೂಡ ಕೇಳಿಬರುತ್ತಿವೆ.

Edited By

Manjula M

Reported By

Manjula M

Comments