ಗೋಲ್ಡನ್ ಸ್ಟಾರ್’ನ ಆರೆಂಜ್ ಫ್ಲೇವರಿನ ಅಫಿಶಿಯಲ್ ಟ್ರೈಲರ್ ರಿಲೀಸ್..!

01 Dec 2018 10:26 AM | Entertainment
457 Report

ಗೋಲ್ಡನ್ ಸ್ಟಾರ್ ಗಣೇಶ್ ಈ ಹಿಂದೆ ಝೂಮ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಶಾಂತ್ ರಾಜ್  ಇದೀಗ ಆರೆಂಜ್ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಇದೀಗ ಬಿಡುಗಡೆಗೆ ಸಿದ್ದವಾಗಿರುವ ಆರೆಂಜ್ ಚಿತ್ರದ ಅಫಿಶಿಯಲ್ ಟ್ರೈಲರ್ ಬಿಡುಗಡೆಯಾಗಿದೆ. ಇದೇ ನವೆಂಬರ್ ತಿಂಗಳ 24ರಂದು ಆರೆಂಜ್ ಚಿತ್ರದ ಟ್ರೈಲರ್ ಬಿಡುಗಡೆಗೆ ದಿನ ನಿಗಧಿಯಾಗಿತ್ತು.

ಆದರೆ ಆರೆಂಜ್ ಚಿತ್ರತಂಡ ಇದಕ್ಕೆ ಬೇಕಾದ ಎಲ್ಲ ರೀತಿಯ ತಯಾರಿಗಳನ್ನೂ ಮಾಡಿಕೊಂಡಿತ್ತು. ಆದರೆ ಆ ದಿನ ಭೀಕರ ಬಸ್ ದುರಂತವೊಂದು ಮಂಡ್ಯದ ಕನಗನಮರಡಿಯಲ್ಲಿ ಸಂಭವಿಸಿತ್ತು. ಈ ಆಘಾತದಿಂದಲೇ ಟ್ರೈಲರ್ ಬಿಡುಗಡೆಯನ್ನು ಮುಂದೂಡಲಾಗಿತ್ತು. ಆದರೀಗ ಅದು ಅನಾವರಣಗೊಂಡಿದೆ. ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ನೈನ್ ಮೆಂಟ್ ಹೊಂದಿರೋ ಈ ಚಿತ್ರ ಮುಂದಿನ ವಾರ ಅದ್ದೂರಿಯಾಗಿ ತೆರೆ ಮೇಲೆ ಬರಲಿದೆ.. ಸಿನಿ ರಸಿಕರು ಈ ಸಿನಿಮಾವನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments

Cancel
Done