ರಾಧಿಕಾ ಬರ್ತಡೇ ಸ್ಪೆಷಲ್: 'ದಮಯಂತಿ' ಟೀಸರ್ ರಿಲೀಸ್: ಹ್ಯಾಪಿ ಬರ್ತ್ ಡೇ ‘ಸ್ವೀಟಿ’

12 Nov 2018 4:41 PM | Entertainment
1054 Report

ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ ನಟಿ… ಕೆಲವೊಂದು ವಿವಾದಗಳಿಂದ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟಿದ್ದರು. ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚೆಗೆ ಹೆಚ್ಚಿಗೆ ಯಾವ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿಲ್ಲ. ಸ್ವೀಟಿ ಸಿನಿಮಾದ ಮೂಲಕ ಚಂದನವನದಲ್ಲಿ  ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದರು. ಇದೀಗ ರಾಧಿಕಾ ಅವರು ಹೊಸ ಚಿತ್ರ ‘ದಮಯಂತಿ’ಯಲ್ಲಿ ನಟಿಸುತ್ತಿದ್ದಾರೆ. ದಮಯಂತಿ ಚಿತ್ರವನ್ನು ನವರಸನ್ ಅವರು ನಿರ್ದೇಶನ ಮತ್ತು ನಿರ್ಮಾಣವನ್ನು ಕೂಡ ಮಾಡಲಿದ್ದಾರೆ. ಇದೊಂದು ಮಹಿಳಾ ಪ್ರಧಾನವಾದ ಚಿತ್ರವಾಗಿದೆ.

ಕನ್ನಡ ಚಿತ್ರರಂಗದಲ್ಲಿ ಕಡಿಮೆ ಮಹಿಳಾ ಪ್ರಧಾನ ಚಿತ್ರಗಳ ಸಾಲಿನಲ್ಲಿ ಇದು ಕೂಡ ಜಾಗ ಗಿಟ್ಟಿಸಿಕೊಳ್ಳಲಿದೆ ‘ಭಾಗಮತಿ’, ‘ಅರುಂದತಿ’ ಯಂತಹ ಸಿನಿಮಾಗಳ ರೀತಿಯಲ್ಲಿಯೇ ಈ ಸಿನಿಮಾ ಇರಲಿದೆಯಂತೆ. ಮೊದಲು ಕನ್ನಡದಲ್ಲಿ ಚಿತ್ರೀಕರಣ ಮಾಡಿ ನಂತರ ತೆಲುಗು ಮತ್ತು ತಮಿಳು ಭಾಷೆಯಲ್ಲಿಯೂ ಈ ಚಿತ್ರವನ್ನನು ನಿರ್ಮಾಣ ಮಾಡುವ ಯೋಜನೆ ಇದೆ ಎಂದು ತಿಳಿಸಿದೆ ಚಿತ್ರತಂಡ. ಸ್ಯಾಂಡನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ತೆರೆ ಮೇಲೆ ಬರಲಿದ್ದಾರೆ. ಅವರ ಮುಂಬರುವ ಚಿತ್ರ ದಮಯಂತಿಗೆ ಮುಹೂರ್ತ ಫಿಕ್ಸ್ ಆಗಿದೆ. ರಾಧಿಕಾ ಹುಟ್ಟುಹಬ್ಬ ನವೆಂಬರ್ 12 ರಂದು ಚಿತ್ರದ ಮುಹೂರ್ತ ನಡೆದಿದ್ದು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ.

 

Keywords: damayanthi title teaser, radika, kannada movie

Edited By

Manjula M

Reported By

Manjula M

Comments