ದಿ ವಿಲನ್ ಚಿತ್ರತಂಡಕ್ಕೆ ಮತ್ತೊಂದು ತಲೆನೋವು: ದಿ ವಿಲನ್ ಸಿನಿಮಾ ಲೀಕ್..!

12 Nov 2018 12:36 PM | Entertainment
175 Report

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾವಾದ ದಿ ವಿಲನ್ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವಾಗಲೆ ಚಿತ್ರತಂಡಕ್ಕೆ ಶಾಕ್ ಆಗಿದೆ..ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ' ದಿ ವಿಲನ್ ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದು, ಎಲ್ಲೆಡೆ ಭರ್ಜರಿ ಹವಾ ಕ್ರಿಯೇಟ್ ಮಾಡಿದೆ.

ಮೊದಲ ದಿನ 20 ಕೋಟಿ ಗಳಿಸಿದ್ದ ವಿಲನ್ ಈಗ ಭರ್ಜರಿ ಕಲೆಕ್ಷನ್ ಮಾಡುತ್ತಿದೆ . ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನವನ್ನು ಕೂಡ ಕಾಣುತ್ತಿದೆ. ಆದರೆ ಸಿನಿಮಾ ಬಿಡುಗಡೆಯಾದ ಕೆಲವು ದಿನಗಳಷ್ಟರಲ್ಲಿ  ದಿ ವಿಲನ್ ಸಿನಿಮಾಗೆ ಫೈರಸಿ ಕಾಟ ಪ್ರಾರಂಭವಾಗಿದೆಯಂತೆ. ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ದಿ ವಿಲನ್ ಸಿನಿಮಾ ಲೀಕ್ ಆಗಿದೆ. ಜನರು ಥಿಯೇಟರ್’ಗೆ ಹೋಗಿ ಸಿನಿಮಾ ನೋಡುವುದನ್ನು ಬಿಟ್ಟು ಮನೆಯಲ್ಲಿ ಕುಳಿತು ದಿ ವಿಲನ್ ಸಿನಿಮಾ ನೋಡುತ್ತಿದ್ದಾರೆ. ಪೈರಸಿ ಚಿತ್ರ ತಂಡಕ್ಕೆ ಬಹುದೊಡ್ಡ ತಲೆ ನೋವಾಗಿದೆ. ಚಿತ್ರತಂಡ ಈ ಬಗ್ಗೆ ಬೇಸರವನ್ನು ವ್ಯಕ್ತ ಪಡಿಸಿದೆ.

Edited By

Manjula M

Reported By

Manjula M

Comments