25 ವರ್ಷದ ಸಂಭ್ರಮದಲ್ಲಿ ಜುರಾಸಿಕ್ ಪಾರ್ಕ್ ಸಿನಿಮಾ..!

12 Nov 2018 9:41 AM | Entertainment
140 Report

ಜುರಾಸಿಕ್ ಪಾರ್ಕ್ ಸಿನಿಮಾ ಇಂದಿಗೂ ಕೂಡ ಎಲ್ಲರಿಗೂ ಚಿರ ಪರಿಚಿತ.. ಮಕ್ಕಳಿಗಂತೂ ಈ ರೀತಿಯ ಸಿನಿಮಾಗಳು ತುಂಬಾ ಇಷ್ಟವಾಗುತ್ತವೆ. ವಿಶ್ವದಾದ್ಯಂತ ಜನಮನ ಗೆದ್ದ ಸ್ಟೀವನ್ ಸ್ಪೀಲ್‌ ಬರ್ಗ್ ಅವರ ಪ್ರಸಿದ್ಧ ಹಾಲಿವುಡ್ ಚಿತ್ರ ಜುರಾಸಿಕ್ ಪಾರ್ಕ್‌ ಗೆ ಇದೀಗ 25 ವರ್ಷ ತುಂಬಿದೆ. ಈ 25 ರ ಸಂಭ್ರಮದಲ್ಲಿ ಜುರಾಸಿಕ್ ಪಾರ್ಕ್ ಥೀಮ್‌ನಲ್ಲಿ ಒಂದು ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.

ಕಲೆ ಹಾಗೂ ವಿನ್ಯಾಸದ ಕುರಿತ ಕ್ಯಾಲಿಫೋರ್ನಿಯಾ ಶೃಂಗವಾದ ಡಿಸೈನರ್ ಕಾನ್ನಲ್ಲಿ ಪ್ರದರ್ಶನವು ನಡೆಯಲಿದೆ ಚಿತ್ರದ ಪ್ರತಿಯೊಂದು ಕ್ಷಣವೂ ರೋಚಕ ಮತ್ತು ಎಲ್ಲರನ್ನೂ ಭಯಗೊಳಿಸುವಂತಿತ್ತು. ಕ್ಷಣಗಳನ್ನು ನೆನಪಿಸುವಂತಹ ಕಲಾ ಪ್ರದರ್ಶನ ಇದೀಗ ಇಲ್ಲಿ ನಡೆಯಲಿದೆ. ಚಿತ್ರವನ್ನು ಹತ್ತಾರು ಬಾರಿ ನೋಡಿದ ಅಭಿಮಾನಿಗಳು ಥಟ್ಟನೆ ಗುರುತಿಸುವಂತೆ ಇಲ್ಲಿ ಚಿತ್ರಿತವಾಗಲಿದೆ ಎಂದು ಡಿಸೈನ್ಕಾನ್ ಕ್ಯುರೇಟರ್ ತಿಳಿಸಿದ್ದಾರೆ.. .16ರಿಂದ 18 ತನಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments