33 ವರ್ಷದ ಹಿಂದಿನ ನೆನಪನ್ನು ನೆನಪಿಸಿಕೊಂಡು ಸಂತಸ ಪಟ್ಟ ‘ಅಪ್ಪು’

10 Nov 2018 5:43 PM | Entertainment
774 Report

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 33 ವರ್ಷದ ಹಿಂದಿನ ನೆನಪು ಮಾಡಿಕೊಂಡು ಸಖತ್ ಎಂಜಾಯ್ ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಬಾಲ ನಟರಾಗಿ ‘ಬೆಟ್ಟದ ಹೂವು’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಎಲ್ಲರ ಮನಸೂರೆ ಕೂಡ ಮಾಡಿತ್ತು.. ಈ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರೆತ್ತಿತ್ತು. ಸದ್ಯ ಪುನೀತ್ ಬೆಟ್ಟದ ಹೂವು ಚಿತ್ರದ ದಿನಗಳನ್ನು ನೆನಪಿಸಿಕೊಂಡು ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಖುಷಿಯಲ್ಲಿದ್ದಾರೆ.

ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ‘ನಟಸಾರ್ವಭೌಮ’ ಚಿತ್ರದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿಗೆ ಹೋಗುವ ಮಾರ್ಗ ಮಧ್ಯೆಯಲ್ಲಿ ಬೆಟ್ಟದ ಹೂವು ಚಿತ್ರದ ಚಿತ್ರೀಕರಣ ಸ್ಥಳದ ನೆನಪಾಗಿ ಕೂಡಲೇ ಕಾರನ್ನು ಅತ್ತಿಗುಂಡಿ ಕಡೆಗೆ ತಿರುಗಿಸಿದ್ದಾರೆ. ಪುನೀತ್ ಆ ಸ್ಥಳಕ್ಕೆ ಹೋದ ನಂತರ ಶೂಟಿಂಗ್ ಸ್ಥಳ, ಶೂಟಿಂಗ್ ಸೆಟ್ ಎಲ್ಲಿ ಹಾಕಿದ್ದು ಹಾಗೂ ಚಿತ್ರದಲ್ಲಿ ಯಾರ್ಯಾರು ಯಾವ ಪಾತ್ರ ಮಾಡಿದ್ದರು ಎಂಬುದನ್ನು ತಿಳಿಸಿದ್ದಾರೆ.  33 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಬೆಟ್ಟದ ಹೂವು ಚಿತ್ರೀಕರಣ ನೆನಪನ್ನು ಅಪ್ಪು ಈಗಲೂ ನೆನಪು ಮಾಡಿಕೊಳ್ಳುತ್ತಾರೆ..

Edited By

Manjula M

Reported By

Manjula M

Comments