KGF ಬಗ್ಗೆ ಕರ್ನಾಟಕದ ಕ್ರಶ್ ಹೇಳಿದ್ದೇನು ಗೊತ್ತಾ..!?

10 Nov 2018 10:24 AM | Entertainment
1998 Report

ಸ್ಯಾಂಡಲ್ ವುಡ್’ನ ಬಹು ನಿರೀಕ್ಷಿತ ಸಿನಿಮಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೈಲರ್ ನೆನ್ನೆಯಷ್ಟೆ ಬಿಡುಗಡೆಯಾಗಿದ್ದು, ಟ್ರೈಲರ್ ನುಡಿದ ಬಹುತೇಕ ಮಂದಿ ದಂಗಾಗಿ ಹೋಗಿದ್ದಾರೆ.ಎಸ್… ಕೆಜಿಎಫ್ ಟ್ರೈಲರ್ ಅದ್ಭುತವಾಗಿ ಮೂಡಿ ಬಂದಿದೆ. ಸಿನಿ ರಸಿಕರ ಮನಸ್ಸನ್ನು ಹುಚ್ಚೆಬ್ಬಿಸಿದಂತೆ ಮಾಡಿದೆ. ಟ್ರೈಲರ್ ನೋಡಿದ ಯಶ್ ಅವರ ಸ್ನೇಹಿತರು,ಅಭಿಮಾನಿಗಳು, ಕಲಾವಿದರು ಚಿತ್ರತಂಡಕ್ಕೆ ಶುಭಾಷಯ ತಿಳಿಸಿದ್ದಾರೆ.

ಕೆಜಿಎಫ್ ಟ್ರೈಲರ್ ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕಿರಿಕ್ ಪಾರ್ಟಿ ಬೆಡಗಿ ಹಾಗೂ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ಷೇರ್ ಮಾಡಿದ್ದಾರೆ. ರಶ್ಮಿಕಾ OMG! OMG! ನಿಜವಾಗಿಯೂ ನಾನು ಕೆಜಿಎಫ್ ಚಿತ್ರದ ಟೈಲರ್ ಗೆ ದಂಗಾಗಿ ಹೋಗಿದ್ದೇನೆ. ಟ್ರೈಲರ್ ಅಮೆಜಿಂಗ್ ಆಗಿದೆ. ಇಡೀ ಚಿತ್ರ ತಂಡಕ್ಕೆ ಬೆಸ್ಟ್ ಹಾಫ್ ಲಕ್ ಚಿತ್ರಕ್ಕಾಗಿ ಮಾಡಿರುವ ಪರಿಶ್ರಮ ಟ್ರೈಲರ್ ನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಚಿತ್ರತಂಡ ಏನು ಬಯಸಿದೆಯೋ ಅದು ಸಿಗುತ್ತದೆ ಎಂದು ರಶ್ಮಿಕಾ ಮಂದಣ್ಣ ಟ್ವೀಟ್’ನಲ್ಲಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments