ಚಾಲೆಂಜಿಂಗ್ ಸ್ಟಾರ್ 53 ನೇ ಚಿತ್ರದ ಥೀಮ್ ಪೋಸ್ಟರ್ ರಿಲೀಸ್

09 Nov 2018 10:38 AM | Entertainment
320 Report

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ ತೂಗುದೀಪ್ ಅವರ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ​ 53 ನೇ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆಯಾಗಿದೆ. ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿರುವ ದರ್ಶನ್ ಮುಂದಿನ ಚಿತ್ರದ ಪೋಸ್ಟರ್ ದೀಪಾವಳಿ ಪ್ರಯುಕ್ತ ಬಿಡುಗಡೆಯಾಗಿದೆ. ಸದ್ಯ ರಿವೀಲ್ ಆಗಿರುವ ಪೋಸ್ಟರ್​ನಲ್ಲಿ ಚಿತ್ರಕಥೆಯ ಒನ್​ ಲೈನ್ ಸ್ಟೋರಿಯ ಸುಳಿವನ್ನು ಬಿಟ್ಟುಕೊಟ್ಟಿರುವುದಾಗಿ ನಿರ್ದೇಶಕ ತರುಣ್ ಸುಧೀರ್ ತಿಳಿಸಿದ್ದಾರೆ.

ಈ ಪೋಸ್ಟರ್ ನಲ್ಲಿ ದರ್ಶನ್​ ತನ್ನ ರಕ್ತಸಿಕ್ತ ಬಲಗೈನಲ್ಲಿ ಪುಟ್ಟ ಮಗುವಿನ ಕೈಯನ್ನು ಹಿಡಿದುಕೊಂಡಿದ್ದಾರೆ. ಪೋಸ್ಟರ್​ನ ಕೆಳಭಾಗದಲ್ಲಿ 'ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು ಎಂದು ಬರೆಯಲಾಗಿದೆ. ದರ್ಶನ್​ ಎದುರು ಹತ್ತು ತಲೆಯ ರಾವಣನ ಕಟೌಟ್​ವೊಂದು ನಿಂತಿರುವುದನ್ನು ಕಾಣಬಹುದಾಗಿದೆ. ಇನ್ನು ಈ ಪೋಸ್ಟರ್ ನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬಿಡುಗಡೆ ಮಾಡಿರುವ ದರ್ಶನ ನನ್ನ 53ನೇ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಕಥೆಯ ಎಳೆ ಏನಿರಬಹುದೆಂಬ ಸಣ್ಣ ಸುಳಿವನ್ನು ನಿರ್ದೇಶಕ ತರುಣ್ ಸುದೀರ್ ಈ ಪೋಸ್ಟರ್ ಮೂಲಕ ತಿಳಿಸಲು ಪ್ರಯತ್ನ ಮಾಡಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಸಹ ಸದ್ಯದಲ್ಲೇ ಅಧಿಕೃತವಾಗಿ ಹೇಳಲಿದ್ದೇವೆ ಎಂದು ಚಿತ್ರತಂಡ ತಿಳಿಸಿದ್ದಾರೆ.

Edited By

Manjula M

Reported By

Manjula M

Comments