ನಟ ದರ್ಶನ್ ಕಾರು ಅಪಘಾತಕ್ಕೆ ಟ್ವಿಸ್ಟ್ ..! ಹಾಗಾದ್ರೆ ದರ್ಶನ್ ಸುಳ್ಳು ಹೇಳಿದ್ರಾ..!?

03 Nov 2018 11:34 AM | Entertainment
997 Report

 ಸ್ವಲ್ಪ ದಿನಗಳ ಹಿಂದಷ್ಟೆ ನಟ ದರ್ಶನ್​ ಅವರಿಗೆ ಮೈಸೂರಿನ ಬಳಿ ಕಾರು ಅಪಘಾತವಾಗಿತ್ತು. ಅಪಘಾತ ವಿಚಾರವಾಗಿ ನಟ ದರ್ಶನ್​ ಸುಳ್ಳು  ಹೇಳಿದ್ರ ಎಂಬ ಅನುಮಾನ ದಟ್ಟವಾಗುತ್ತಿದೆ.  RTO ಅಧಿಕಾರಿಗಳು ಅಪಘಾತವಾದ ಕಾರನ್ನು ಪರಿಶೀಲನೆ ನಡೆಸುವಾಗ ಸ್ಫೋಟಕ ಮಾಹಿತಿಯೊಂದನ್ನು ತಿಳಿಸಿದ್ದಾರೆ. ಅಂದಹಾಗೇ ನಟ ದರ್ಶನ್​ ಕಾರಿನಲ್ಲಿ ಪ್ರಯಾಣಿಸುತ್ತಿದ್ದುದ್ದು ನಾಲ್ಕು ಮಂದಿ ಎಂದು ಸುಳ್ಳು  ಹೇಳಿದ್ಯಾಕೆ. ಅಪಘಾತದಿಂದ ತತ್​ಕ್ಷಣವೇ ಕಾರು ನಾಪತ್ತೆಯಾಗಿದ್ಯಾಕೆ ಎಂಬ ಪ್ರಶ್ನೆಗಳು ಮೂಡುತ್ತವೆ.ಸೆ.23ರಂದು ದರ್ಶನ್‌ ಕಾರು ಅಪಘಾತಕ್ಕಿಡಾಗಿದೆ. ಆ ಕಾರನ್ನ ಅವರ ಗೆಳೆಯ ಆಂಟೋನಿ ರಾಯ್‌ ಚಾಲನೆ ಮಾಡುತ್ತಿದ್ದರು. ರಿಂಗ್‌ರಸ್ತೆಯ ಜಂಕ್ಷನ್‌ ಬಳಿ ರಾಯ್‌ ಅವರ ನಿರ್ಲಕ್ಷ್ಯತನದಿಂದ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ನಂತರ ಕಾರಿನಲ್ಲಿದ್ದ 5 ಮಂದಿಗೆ ಗಾಯಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಮಯದಲ್ಲಿ ದರ್ಶನ್‌ರಿಗೆ ಸಹಾಯ ಮಾಡಲು ಬಂದ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಅವರಿಗೆ ಗಾಯಗಳಾಗಿದೆ.  ಎಂದುನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಮೂರ್ನಾಲ್ಕು ದಿನಗಳ ಕಾಲ ಅವರು ಸಹ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಾರನ್ನ ಸರ್ಕಾರಿ ಆರ್‌ಟಿಓ ಅಧಿಕಾರಿಗಳು ಪರಿಶೀಲಿಸಿದ್ದು ಯಾವುದೇ ತಾಂತ್ರಿಕ ಕಾರಣದಿಂದ ಅಪಘಾತ ಆಗಿಲ್ಲ ಎಂದು ವರದಿ ನೀಡಿದ್ದಾರೆ.ಘಟನೆ ಸಂಬಂಧ ನಟರಾದ ದರ್ಶನ್‌, ದೇವರಾಜ್‌, ಪ್ರಜ್ವಲ್‌ದೇವರಾಜ್‌ ಚಾಲಕ ಆಂಟೋನಿ, ಕಾರಿನಲ್ಲಿದ್ದ ಪ್ರಕಾಶ್‌ ಎಂಬುವ ಹೇಳಿಕೆ ಪಡೆಯಲಾಗಿದೆ. ಎಲ್ಲರ ಹೇಳಿಕೆಯಲ್ಲು ಆಂಟೋನಿಯವರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಸಹಜ ಅಭಿಪ್ರಾಯ ಬಂದಿದೆ. ಒಂದು ವೇಳೆ ಆಂಟೋನಿ ತನ್ನ ನಿರ್ಲಕ್ಷ್ಯತನ ಕಾರಣವೆಂದು ಒಪ್ಪಿಕೊಂಡರೆ, ದರ್ಶನ್​ ದೇವರಾಜ್​ ಪ್ರಜ್ವಲ್​ ಗೆ ಕೋರ್ಟ್​ ನೊಟೀಸ್​ ಜಾರಿ ಮಾಡುವುದಿಲ್ಲ. ಒಪ್ಪಿಕೊಳ್ಳದೇ ಇದ್ರೆ ಕೋರ್ಟ್​ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ಬಂದರೂ ಬರಬಹುದು .

Edited By

Manjula M

Reported By

Manjula M

Comments