ಕನ್ನಡದಲ್ಲಿಯೇ ರಾಜ್ಯೋತ್ಸವದ ಶುಭಾಷಯ ಕೋರಿದ ಪವನ್ ಕಲ್ಯಾಣ್..

01 Nov 2018 4:10 PM | Entertainment
314 Report

ನವೆಂಬರ್ ಬಂತು ಅಂದರೆ ಸಾಕು ಎಲ್ಲ ಕಡೆಯಲ್ಲೂ ಕೂಡ ಕನ್ನಡಮಯ.. ಟಾಲಿವುಡ್​ ಪವರ್ ಸ್ಟಾರ್​ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥರಾದ ಪವನ್​ ಕಲ್ಯಾಣ್​ ಅವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡಿಗರಿಗೆ ಟ್ವೀಟ್​ ಮೂಲಕ ಶುಭಾಷಯ ತಿಳಿಸಿದ್ದಾರೆ..  

63ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ನಟ ಪವನ್ ಕಲ್ಯಾಣ್ ಕನ್ನಡಿಗರಿಗೆ ಶುಭಾಶಯ ತಿಳಿಸಿದ್ದಾರೆ, 'ಸಮಸ್ತ ಕನ್ನಡ ಪ್ರಜೆಗಳಿಗೆ, ಕರ್ನಾಟಕದ ಮುಖ್ಯಮಂತ್ರಿಗಳಿಗೆ ಹಾರ್ದಿಕ ಶುಭಾಶಯಗಳು ಎಂದು ಕನ್ನಡದಲ್ಲೇ ಟ್ವೀಟ್​ ಮಾಡಿರುವುದು ಕನ್ನಡರಿಗೆ ಖುಷಿ ಕೊಟ್ಟಿದೆ. ಅಲ್ಲದೆ 'ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ' ಎಂಬ ಘೋಷಣೆಯನ್ನೂ ಕೂಗಿ ತಮ್ಮ ಕನ್ನಡ ಪ್ರೇಮವನ್ನು ಪವನ್ ಕಲ್ಯಾಣ್ ಮೆರೆದಿದ್ದಾರೆ. ಇದೇ ಸಮಯದಲ್ಲಿ ಕರ್ನಾಟಕ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಕಾರ್ಯವನ್ನು ಶ್ಲಾಘಿಸಿರುವ ಪವನ್ ಕಲ್ಯಾಣ್, 'ನನ್ನ ಪ್ರೀತಿಯ ಹಾಗೂ ಗೌರವಾನ್ವಿತ ಸಹೋದರ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ಎಲ್ಲ ದಿಕ್ಕುಗಳಲ್ಲಿ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ ಎಂಬುದನ್ನು ನಾನು ನಂಬಿದ್ದೇನೆ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments