ಕನ್ನಡ ಸಿನಿಮಾ ರಂಗಕ್ಕೆ ಗುಡ್ ಬಾಯ್ ಹೇಳ್ತಾರಾ ನಟ ಚೇತನ್..!?

27 Oct 2018 9:11 AM | Entertainment
1653 Report

ಆ ದಿನಗಳು, ಮೈನಾ ಸಿನಿಮಾದಿಂದ ಸಾಕಷ್ಟು ಹೆಸರು ಮಾಡಿದ ನಟ ಚೇತನ್ ಇತ್ತಿಚಿಗೆ ಮೀಟೂ ಅಭಿಯಾನದಲ್ಲಿ ಶೃತಿ ಹರಿಹರನ್ ಪರವಾಗಿ ಬೆಂಬಲ ನೀಡಿದ್ದರು. ಆದರೆ ಚೇತನ್ ವಿರುದ್ದ ಇದೀಗ ಆಕ್ರೋಶಗಳು ಹೆಚ್ಚಾಗುತ್ತಿವೆ. ಹಾಗಾಗಿ ಅವರು ಕನ್ನಡ ಸಿನಿಮಾರಂಗಕ್ಕೆ ಗುಡ್ ಬಾಯ್ ಹೇಳಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಒಬ್ಬ ಒಳ್ಳೆಯ ನಟ ಸುಖಾ ಸುಮ್ಮನೆ ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ತಮ್ಮ ಭವಿಷ್ಯಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಟ ಚೇತನ್ ಅವರು ಕನ್ನಡ ಸಿನಿಮಾ ರಂಗಕ್ಕೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.  ತಂದೆ ತಾಯಿ ಜೊತೆ ಅಮೇರಿಕಾದಲ್ಲಿ ನೆಲೆಸಿದ್ದ ನಟ ಚೇತನ್ ಕರ್ನಾಟಕಕ್ಕೆ ಬಂದು 'ಆ ದಿನಗಳು' ಸಿನಿಮಾದಲ್ಲಿ ನಟಿಸುವುದರ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ ನಟ ಚೇತನ್ ಅವರು ನಂತರ ಸಂಘಟನೆಗಳ ಮೂಲಕ ತಮ್ಮನ್ನು ಹೆಚ್ಚು ಗುರುತಿಸಿಕೊಂಡಿದ್ದರು. ಇದೀಗ ಶ್ರುತಿ ಹರಿಹರನ್ ಅವರ ಮೀಟೂ ಆರೋಪಕ್ಕೆ ಬೆಂಬಲ ಸೂಚಿಸಿರುವುದಕ್ಕೆ ಚೇತನ್ ವಿರುದ್ದ ಆಕ್ರೋಶಗಳು ಹೆಚ್ಚಾಗುತ್ತಿವೆ, ಈ ಹಿನ್ನಲೆಯಲ್ಲಿ ಇದೀಗ ಚೇತನ್ ತಂದೆ ತಾಯಿ ಕೂಡಲೇ ವಾಪಸ್ಸು ಆಮೇರಿಕಾಕ್ಕೆ ವಾಪಾಸ್ಸಾಗುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

Edited By

Manjula M

Reported By

Manjula M

Comments