ಹೆಬ್ಬುಲಿ ನಾಯಕಿ ಅಮಲಾ ಪೌಲ್’ನಿಂದ #Metoo ಆರೋಪ..!

25 Oct 2018 2:55 PM | Entertainment
1607 Report

ಸ್ಯಾಂಡಲ್ ವುಡ್’ನಲ್ಲಿ ಮೀ ಟೂ ಆರೋಪಗಳು ದಿನದಿಂದ ಹೆಚ್ಚಾಗುತ್ತಿವೆ., ದಿನಕ್ಕೊಂದರಂತೆ ನಟ, ನಿರ್ದೇಶಕರ ಮೇಲೆ ಆರೋಪಗಳು ವರದಿಯಾಗುತ್ತಲೆ ಇವೆ..  ಇಷ್ಟು ದಿನ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಆರೋಪವನ್ನು ಹಾಕಿದ್ದರು. ಆ ಆರೋಪ ಇನ್ನೂ ಹಾಗೆಯೆ ಇದೆ. ಅದರ ಬೆನ್ನಲೆ ಹೊಸ ಸಾಕ್ಷಿ ಎಂಬಂತೆ ಹೆಬ್ಬುಲಿ ಚಿತ್ರದ ನಾಯಕಿಯಾಗಿದ್ದ ಅಮಲಾ ಪೌಲ್‌ ಅವರು ತಮಿಳು ನಿರ್ದೇಶಕ ಸುಸಿ ಗಣೇಶನ್‌ ವಿರುದ್ಧ ಆರೋಪ ಮಾಡಿದ್ದಾರೆ. ತಿರುಟು ಪಾಯಲೆ-2 ಚಿತ್ರದ ಶೂಟಿಂಗ್ ಸಮಯದಲ್ಲಿ ಸುಸಿ ಗಣೇಶನ್‌ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ.

ಸುಸಿ ಗಣೇಶನ್‌ ವಿರುದ್ದ ಲೇಖಕಿ ಲೀನಾ ಮನಿ ಮೆಕ್ಕಾಲೈ ಅವರು ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಲೀನಾ ಅವರ ಬೆಂಬಲಕ್ಕೆ ಅಮಲಾ ಅವರು ಕೂಡ ನಿಂತಿದ್ದರು.  ಅಷ್ಟು ಮಾತ್ರವಲ್ಲದೆ ನಿಮ್ಮ ಧೈರ್ಯವನ್ನು ಮೆಚ್ಚುತ್ತೇನೆ ಎಂದು ಕೂಡ ಹೇಳಿದ್ದರು. ಲೀನಾ ಅವರನ್ನು ಬೆಂಬಲಿಸಿದ್ದಕ್ಕೆ ಸುಸಿ ಗಣೇಶನ್‌ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಅಮಲಾ ಹೇಳಿಕೊಂಡಿದ್ದಾರೆ. 26 ರ ಹರೆಯದ ಅಮಲಾ ಪೌಲ್‌ ಅವರು ಮಲಯಾಳಂ ಚಿತ್ರದ ಮೂಲಕ ಬಣ್ಣದ ಬದುಕಿಗೆ ಬಂದಿದ್ದರು.. ತೆಲುಗು, ತಮಿಳು ಮತ್ತು ಕನ್ನಡದ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಚತುರ್ಭಾಷಾ ತಾರೆ ಎನಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ಅಮಲಾ ಪೌಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

Edited By

Manjula M

Reported By

Manjula M

Comments