ಸ್ಯಾಂಡಲ್ ವುಡ್’ನಿಂದ ನಟಿ ಶೃತಿ ಹರಿಹರನ್ ಹಾಗೂ ನಟ ಚೇತನ್ ಬ್ಯಾನ್..!?

22 Oct 2018 3:36 PM | Entertainment
680 Report

ಮೀಟೂ ಅಭಿಯಾನದ ಮೂಲಕ ಸ್ಯಾಂಡಲ್ ವುಡ್’ನಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ನಟಿ ಶೃತಿ ಹರಿಹರನ್ ಅವರ ಹೇಳಿಕೆಯು ಇದೀಗ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕೆಲವರು ಶೃತಿ ಪರ ಮಾತನಾಡಿದರೆ ಮತ್ತೆ ಕೆಲವರು ಅರ್ಜುನ್ ಸರ್ಜಾ ವಿರುದ್ದ ಮಾತನಾಡುತ್ತಿದ್ದಾರೆ..  

ಬಹುಭಾಷಾ ನಟರಾದ ಅರ್ಜುನ್ ಸರ್ಜಾ ವಿರುದ್ಧ `ಲೈಂಗಿಕ ಕಿರುಕುಳ' ಆರೋಪ ಮಾಡಿರುವುದು ಎಲ್ಲರಿಗೂ ಕೂಡ ತಿಳಿದಿದೆ. ಇದರ ನಡುವೆಯೇ  ಇಂದು ಫಿಲ್ಮಂ ಚೇಂಬರ್ ಮುಂಭಾಗ ಪುರುಷ ರಕ್ಷಣಾ ವೇದಿಕೆ ಸದ್ಯಸರು ಪ್ರತಿಭಟನೆ ನಡೆಸಿ, ಅರ್ಜುನ್ ಸರ್ಜಾ ಅವರ ವಿರುದ್ದ ಷಡ್ಯಂತ್ರ ನಡೆಸಲಾಗುತ್ತಿದ್ದು, ನಟ ಚೇತನ್, ನಟಿ ಶೃತಿ ಹರಿಹರನ್ ಅವರನ್ನು ಸ್ಯಾಂಡಲ್ ವುಡ್ ನಿಂದ ಬ್ಯಾನ್ ಮಾಡುವಂತೆ ಆಗ್ರಹ ಮಾಡಿದ್ದಾರೆ. ಈ ಸಂಬಂಧವಾಗಿ ಫಿಲ್ಮ್ ಚೇಂಬರ್ ಯಾವ ರೀತಿ ನಿರ್ಧಾರ ಮಾಡುತ್ತದೆ ಎಂಬುದನ್ನು ಕಾದು ನೊಡಬೇಕಿದೆ.

Edited By

Manjula M

Reported By

Manjula M

Comments