‘ದಿ ವಿಲನ್’ ಸಿನಿಮಾ ಬಿಡುಗಡೆಗೆ ಎದುರಾಯ್ತು ಮತ್ತೊಂದು ಸಂಕಷ್ಟ..!

17 Oct 2018 10:24 AM | Entertainment
4361 Report

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾವಾದ ದಿ ವಿಲನ್ ಗೆ ಕ್ಷಣಗಣನೆ ಆರಂಭವಾಗಿದೆ.. ನಟ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾದ ಹಾಡಿನಲ್ಲಿ ಗರುಡ್ನಂಗೆ ಇದ್ದೋನ್ ನೋಡ್ಲಾ ಕುರುಡ್ನಂಗ್ ಆಗೋದ್ನೋ ಎಂಬ ಸಾಲಿನ ಕುರುಡು ಪದ ತೆಗೆಯುವಂತೆ ಅಂಧ ಸಮುದಾಯವು ಒತ್ತಾಯಿಸಿದೆ.

ಅ. 18 ರಂದು ದಿ ವಿಲನ್ ಸಿನಿಮಾ ತೆರೆಗೆ ಬರಲಿದೆ. ಕುರುಡ ಪದ ತೆಗೆಯದಿದ್ದರೆ  ಸಿನಿಮಾ ಬಿಡುಗಡೆಯಂದು ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡುವುದಾಗಿ ಅಂಧ ಸಮುದಾಯವು ಎಚ್ಚರಿಕೆಯನ್ನು ನೀಡಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಂಧ ಸಮುದಾಯದ ಪ್ರತಿನಿಧಿ ಎಂ.ವಿರೇಶ್, ಈ ಹಾಡಿನಲ್ಲಿ ಬಳಸಿರುವ ಕುರುಡ ಪದವನ್ನು ತೆಗೆದು ಹಾಕಬೇಕು. ಚಲನಚಿತ್ರಗಳಲ್ಲಿ ಅಂಧತ್ವವನ್ನು ಹೀನಾಯವಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಆದರೆ ಸಿನಿಮಾ ಬಿಡುಗಡೆ ಸಮಯದಲ್ಲಿ ಇದೀಗ ಮತ್ತೊಂದು ತಲೆನೋವು ಚಿತ್ರತಂಡಕ್ಕೆ ಬಂದಿದೆ.

Edited By

Manjula M

Reported By

Manjula M

Comments