ಸರ್ಕಾರಿ ಶಾಲೆಯನ್ನು ದತ್ತು ಪಡೆದ ‘ಪೊರ್ಕಿ’ ಪ್ರಣೀತಾ..!

16 Oct 2018 5:57 PM | Entertainment
1656 Report

ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ  'ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಚಿತ್ರದ ಮೂಲಕ ಕನ್ನಡಿಗರಲ್ಲಿ ಸರ್ಕಾರಿ ಶಾಲೆಗಳ ಮಹತ್ವ ತಿಳಿಸುವಲ್ಲಿ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ಆ ಶಾಲೆಯನ್ನೇ ದತ್ತು ಪಡೆದು,ಒಳ್ಳೆ ಕೆಲಸವನ್ನು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ರಿಷಬ್ ಶೆಟ್ಟಿ ಸಾಲಿಗೆ ಪ್ರಣೀತಾ ಕೂಡ ಸೇರಿಕೊಂಡಿದ್ದಾರೆ.

ಹುಟ್ಟಿ ಬೆಳೆದುದೆಲ್ಲಾ ಬೆಂಗಳೂರಾದರೂ ಕೂಡ ಪ್ರಣೀತಾಳ ಊರು ಹಾಸನ ಸಮೀಪದ ಆಲೂರು. ಯಾರಿಗೆ ತಾನೇ ಹುಟ್ಟೂರಿನ ಬಗ್ಗೆ ಆಸೆ ಇರಲ್ಲ ಹೇಳಿ.. ಪ್ರಣೀತಾ ತನ್ನೂರಿನ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಅಷ್ಟೇ ಅಲ್ಲ ಆ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಹೇಳಿ ಕೊಟ್ಟಿದ್ದಾರಂತೆ. ಶಾಲೆಗೆ 5 ಲಕ್ಷ ರೂ. ಖರ್ಚು ಮಾಡಿ ಸ್ವಚ್ಛ ಶೌಚಾಲಯದ ಜೊತೆಗೆ ಅಗತ್ಯ ಮೂಲ ಸೌಕರ್ಯವನ್ನು ಕೂಡ ಪೂರೈಸಿದ್ದಾರೆ. ಶಾಲೆಯನ್ನು ದತ್ತು ಪಡೆಯುವುದರ ಜೊತೆಗೆ, ಊರಿಗೂ ವಾರಕ್ಕೊಮ್ಮೆ ಹೋಗಿ ಬರುವ ಪರಿಪಾಠವನ್ನು ಬೆಳೆಯಿಸಿಕೊಂಡಿದ್ದಾರೆ. ಆ ಮೂಲಕ ಡಬ್ಬಲ್ ಖುಷಿ ಅನುಭವಿಸುತ್ತಿದ್ದಾರೆ ಪೊರ್ಕಿ ಹುಡುಗಿ ಪ್ರಣಿತಾ..

Edited By

Manjula M

Reported By

Manjula M

Comments