ಬಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡ ‘ಕಿರಿಕ್ ಪಾರ್ಟಿ’ಯ ಕಿರಿಕ್ ಹುಡುಗಿ ..!

16 Oct 2018 10:02 AM | Entertainment
1395 Report

ಚಂದನವನಕ್ಕೆ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ  ಎಂಟ್ರಿ ಕೊಟ್ಟ ಸಂಯುಕ್ತಾ ಹೆಗಡೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಹುಡುಗಿ ಅಂತಾನೇ ಫೇಮಸ್ ಆಗಿಬಿಟ್ಟಿದ್ದಾರೆ. ಕಿರಿಕ್ ಮಾಡಿಕೊಂಡೆ ಸುದ್ದಿಯಾಗುತ್ತಿರುವ ಸ್ಯಾಂಡಲ್ ವುಡ್ ನ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಇದೀಗ ಬಾಲಿವುಡ್ ನ ಶೋವೊಂದರಲ್ಲೂ ಕಿರಿಕ್ ಮಾಡಿಕೊಂಡಿದ್ದಾರಂತೆ.. 

ನಟಿ ಸಂಯುಕ್ತ ಹೆಗ್ಡೆ ಕನ್ನಡದ ಬಿಗ್ ಬಾಸ್ ಸೀಸನ್ 5 ರ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಅಲ್ಲೂ ಕೂಡ ಸಿಕ್ಕಾಪಟ್ಟೆ ಕಿರಿಕ್ ಮಾಡಿಕೊಂಡಿದ್ದರು. ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡುವುದರ ಮೂಲಕ ಕಿರಿಕ್ ಮಾಡಿಕೊಂಡಿದ್ದಾರೆ. ಹಾಗೇ ಇದೀಗ ಬಾಲಿವುಡ್ ನಟಿ ಸನ್ನಿಲಿಯೋನ್ ಮತ್ತು ರಣ್‍ವಿಜಯ್ ಸಿಂಗಾ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಎಂಟಿವಿಯ `ಸ್ಪ್ಲಿಟ್ಸ್ ವಿಲ್ಲಾ' ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸಂಯುಕ್ತ ಹೆಗಡೆ ಬಿಳಿ ಮತ್ತು ಕಪ್ಪು ಬಣ್ಣದ ಬಿಕಿನಿ ತೊಟ್ಟು ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಂಬಾ ಹಾಗೂ ಮೈರಾ ನಡುವೆ ಈಗಾಗಲೇ ಲವಿಡವಿ ನಡೆಯುತ್ತಿತ್ತು. ಇದೀಗ ಸಂಯುಕ್ತ ಅವರ ಎಂಟ್ರಿಯಿಂದ ಸಿಂಬಾ ಕಣ್ಣು ಸಂಯುಕ್ತ ಕಡೆಗೆ ವಾಲಿದೆ.. ಇದರಿಂದಾಗಿ ಮೈರಾ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ. ಹಾಗೇ ಒಂದೇ ದಿನಕ್ಕೆ ಇತರ ಸ್ಪರ್ಧಿಗಳು ಅವರನ್ನು ಶೋದಿಂದ ಹೊರ ಕಳುಹಿಸಲು ಪ್ಲಾನ್ ಮಾಡುತ್ತಿದ್ದಾರಂತೆ. ಆದರೂ ಸ್ಯಾಂಡಲ್ ವುಡ್ನಲ್ಲೆ ಹೆಸರು ಮಾಡೋದು ಬಿಟ್ಟು ಈರೀತಿ ಕಿರಿಕ್ ಮಾಡಿಕೊಂಡು ಹೆಸರು ಹಾಳು ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂಬುದು ಅಭಿಮಾನಿಗಳ ಮಾತು.

Edited By

Manjula M

Reported By

Manjula M

Comments