ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗೀತಾ’ ಚಿತ್ರಕ್ಕೆ ಪಾರ್ವತಿ ಅರುಣ್ ನಾಯಕಿ

15 Oct 2018 3:21 PM | Entertainment
511 Report

ಚಂದನವನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾಗಳಿಗಾಘಿ ಕಾಯುವ ಅಭಿಮಾನಿಗಳಿದ್ದಾರೆ.. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾವು ಅಭಿಮಾನಿಗಳ ಕೂತುಹಲವನ್ನು ಹೆಚ್ಚಿಸಿದೆ. ಗೀತಾ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದು, ಆ ನಾಯಕಿಯರ ಪೈಕಿ ಮೊದಲ ನಾಯಕಿ ಆಯ್ಕೆಯಾಗಿದ್ದಾರೆ.   

ಪಾರ್ವತಿ ಅರುಣ್ ಗೀತಾ ಸಿನಿಮಾದ ಮೊದಲ ಹೀರೋಯಿನ್  ಆಗಿ ಆಯ್ಕೆಯಾಗಿದ್ದಾರೆ. ಪಾರ್ವತಿ ಹೊಸಮುಖವಾಗಿದ್ದು, ಗೀತಾ ಸಿನಿಮಾಗೆ ಈಗಾಗಲೇ ಸಹಿ ಮಾಡಿದ್ದಾರೆ. ಪಾರ್ವತಿ ಈ ಮೊದಲು ಮಲಯಾಳಂ ನಲ್ಲಿ ನಟಿಸಿದ್ದಾರೆ, ಕನ್ನಡದಲ್ಲಿ ಇದು ಅವರ ಮೊದಲ ಸಿನಿಮಾವಾಗಿದೆ, ಗಣೇಶ್ ಜೊತೆ ಪರದೆ ಹಂಚಿಕೊಳ್ಳುತ್ತಿರುವ ಪಾರ್ವತಿ ಜೊತೆ ಇನ್ನೂ ಇಬ್ಬರು ನಾಯಕಿಯರಿದ್ದಾರೆ, ಗಣೇಶ್ ಸದ್ಯ ಗಿಮ್ಮಿಕ್ ಶೂಟಿಂಗ್ ಗಾಗಿ ಶ್ರೀಲಂಕಾದಲ್ಲಿದ್ದಾರೆ, ಇದಾದ ನಂತರ ಗೀತಾ ಶೂಟಿಂಗ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ. ವಿಜಯ್ ನಾಗೇಂದ್ರ ಗೀತಾ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

Edited By

Manjula M

Reported By

Manjula M

Comments