ಬಿಗ್ ಬ್ರೇಕಿಂಗ್ : ನಟ ಶಿವರಾಜ್‌ಕುಮಾರ್‌ ದಿಢೀರ್ ಆಸ್ಪತ್ರೆಗೆ ದಾಖಲು..!

15 Oct 2018 10:28 AM | Entertainment
1574 Report

ಸ್ಯಾಂಡಲ್ ವುಡ್ ಮೋಸ್ಟ್ ಹ್ಯಾಂಡ್ಸಮ್ ಗಾಯ್ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜ್ವರದಿಂದ ಬಳಲುತ್ತಿದ್ದು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಶಿವಣ್ಣ ಅವರು ನಿನ್ನೆ ಮಧ್ಯರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದ್ದು ಹೆಚ್ಚಿನ ಮಾಹಿತಿಯನ್ನು ಕಾಯುತ್ತಿದ್ದಾರೆ.

ಸ್ಯಾಂಡಲ್ ವುಡ್ ನ ಬಹು ನೀರಿಕ್ಷಿತ ಸಿನಿಮಾ ದಿ ವಿಲನ್‌ ಸಿನಿಮಾದ ಬಿಡುಗಡೆಯ ವೇಳೆಯಲ್ಲೆ ಶಿವರಾಜ್ ಕುಮಾರ್ ಅವರ‍ ಆರೋಗ್ಯದಲ್ಲಿ ಏರು ಪೇರು ಆಗಿದ್ದು, ಅಭಿಮಾನಿಗಳಲ್ಲಿ ಆತಂಕ್ಕೆ ಕಾರಣವಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇಗ ಗುಣಮುಖರಾಗಲಿ ಅಭಿಮಾನಿಗಳು ದೇವರಲಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ದಿ ವಿಲನ್ ಬಿಡುಗಡೆಯ ಸಮಯದಲ್ಲಿ ಶಿವಣ್ಣ ಲವಲವಿಕೆಯಿಂದ ಇರಲಿ ಅನ್ನೋದು ಅಭಿಮಾನಿಗಳ ಆಶಯ..

Edited By

Manjula M

Reported By

Manjula M

Comments