ನಿನ್ನದೇ ಗಲಾಟೆ ಎಂದು ಹೇಳಿ ದರ್ಶನ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ..!? ವಿಡಿಯೋ ವೈರಲ್

13 Oct 2018 12:50 PM | Entertainment
342 Report

ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೌಹಾರ್ದ ನಡಿಗೆ ಪಾರಿವಾಳ ಹಾರಿಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ್ದಾರೆ ಇನ್ನೂ ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ನಡೆದ ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆ ರಾಕ್‍ಲೈನ್ ವೆಂಕಟೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆಯನ್ನು ನೀಡಿದ್ದಾರೆ.  

ಈ ನಡುವೆ ಮುರುಘಾಮಠಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬೆಳಗ್ಗೆ ಆಗಮಿಸಿದರು. ದರ್ಶನ್ ಮೊದಲೇ ಪ್ರಾಣಿ ಪ್ರಿಯರು. ಆದ ಕಾರಣ ದರ್ಶನ್ ಮಠಕ್ಕೆ ಬರುತ್ತಿದ್ದಂತೆ ಮಠದ ಆನೆ ಬಗ್ಗೆ ವಿಚಾರಿಸಿದ್ದಾರೆ. ಆನೆ ಮಾವುತ ಬಳಿ ಆನೆ ಆರೋಗ್ಯದ ಬಗ್ಗೆಯೂ ವಿಚಾರಿಸಿ ತಿಂಡಿ ಏನು ಕೊಟ್ಟಿದ್ದೀರಿ ಎಂದು ಮಾವುತರನ್ನು ಮಾತನಾಡಿಸಿದ್ದಾರೆ.. ಇದೇ ವೇಳೆ ದರ್ಶನ್ ಗಲಾಟೆ ಮಾಡಬಾರದು ಆವಾಗಿನಿಂದ ನಿನ್ನದೇ ಗಲಾಟೆ ಎಂದು ಹೇಳಿ ಅಭಿಮಾನಿಗೆ ಎಚ್ಚರಿಕೆ ಕೊಟ್ಟರು.

Edited By

Manjula M

Reported By

Manjula M

Comments