ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ರಾಜಕಾರಣಕ್ಕೆ ಗುಡ್ ಬೈ ಹೇಳ್ತಾರ..!?

13 Oct 2018 10:36 AM | Entertainment
301 Report

ಮಾಜಿ ಸಿಎಂ ಸಿದ್ದರಾಮಯ್ಯ ಜಿ.ಟಿ.ದೇವೇಗೌಡರ ವಿರುದ್ಧ ಚಾಮುಂಡೇಶ್ವರಿ ವಿಧಾನಸಭಾ ಚುನಾವಣೆಯಲ್ಲಿ ನಿಂತು ಸೋತು ಹೋಗಿದ್ದು ನಿಮಗೆಲ್ಲಾ ಗೊತ್ತೆ ಇದೆ. ಏನಪ್ಪ ಅಂದ್ರೆ ಮೈಸೂರು ಜಿಲ್ಲಾ ರಾಜಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗುಡ್ ಬೈ ಹೇಳಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.  

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಹೆಚ್ಚಾಗಿ ಮೈಸೂರಿಗೆ ಹೋಗುತ್ತಿಲ್ಲ..  ಇದಲ್ಲದೇ ಮೈಸೂರು ರಾಜಕೀಯದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದುತ್ತಿಲ್ಲ ಎಂದು ಹೇಳಲಾಗುತ್ತಿದೆ.  ಒಂದು ವೇಳೆ ಅವರು ಮೈಸೂರಿಗೆ ತೆರಳಿದರು ಕೂಡ ಅವರ ಆಪ್ತರನ್ನು ಭೇಟಿಯಾಗಿ ವಾಪಸ್ಸು ಬಂದು ಬಿಡುತ್ತಾರೆ.. ತಮ್ಮ ರಾಜಕೀಯಸ ಅವಧಿಯಲ್ಲಿ ಬಾದಾಮಿ ಕ್ಷೇತ್ರದ ಜನತೆಗೆ ಒಂದಷ್ಟು ಕೆಲಸಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಕೂಡ ಸಿದ್ದರಾಮಯ್ಯ ಮುಂದಾಗಿದ್ದು, ತಮ್ಮನು ಕಷ್ಟ ಕಾಲದಲ್ಲಿ ಗೆಲ್ಲಿಸಿದವರತ್ತ ಗಮನವನ್ನು ಹರಿಸುತ್ತಿದ್ದಾರೆ ಎನ್ನಲಾಗಿದೆ, ಈ ಕಾರಣಕ್ಕೆ ಅವರು ಮೈಸೂರು ಜಿಲ್ಲಾ ರಾಜಕೀಯಕ್ಕೆ ಸದ್ಯದ ಮಟ್ಟಿಗೆ ಗುಡ್ ಬೈ ಹೇಳಿದ್ದಾರೆ ಎಂದು ಹೇಳುತ್ತಿದ್ದಾರೆ.

Edited By

Manjula M

Reported By

Manjula M

Comments