ಬಿಗ್ ಬಾಸ್ ವೀಕ್ಷಕರಿಗೆ ಬಿಗ್ ಶಾಕ್..! ಸೆಲೆಬ್ರಿಟಿಗಳಿಗಿಂತ ಕಾಮನ್ ಮ್ಯಾನ್ ಜಾಸ್ತಿ ಇರ್ತಾರ..!?

12 Oct 2018 5:55 PM | Entertainment
367 Report

ಕಿರುತೆರೆಯ ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಇದೇ ಅಕ್ಟೋಬರ್ 21 ರಿಂದ ಆರಂಭವಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಪ್ರಸಾರವಾಗುವ ದಿನಾಂಕ ಘೋಷಿಸಿದ್ದು ಈ ಬಾರಿ ಯಾರೆಲ್ಲಾ ಬಿಗ್ ಮನೆ ಪ್ರವೇಶ ಮಾಡ್ತಾರೆ ಎಂಬ  ಕುತೂಹಲ ಶುರುವಾಗಿದೆ. ಅಕ್ಟೋಬರ್ 21 ರಂದು ಕನ್ನಡ ಬಿಗ್ ಬಾಸ್ ಸೀಸನ್ 6 ಕ್ಕೆ ಪ್ರಾರಂಭವಾಗಲಿದೆ. ಇದೆಲ್ಲಾದರ ಮಧ್ಯೆ ಬಿಗ್ ಬಾಸ್ ಕಡೆಯಿಂದ ಶಾಕಿಂಗ್ ಸುದ್ದಿಯೊಂದು ಕೇಳಿಬಂದಿದೆ.

ಕಳೆದ ಸೀಜನ್ ನಲ್ಲಿ ಅರ್ಧ ಜನ ಸೆಲೆಬ್ರಿಟಿಗಳು ಇನ್ನುಳಿದ ಅರ್ಧ ಜನ ಕಾಮನ್ ಮ್ಯಾನ್’ಗಳು ಪ್ರವೇಶ ಮಾಡಿದ್ದರು. ಈ ಸಲನೂ ಇದೇ ರೀತಿ ಬಿಗ್ ಬಾಸ್ ಬರ್ತಾರೆ ಅಂದುಕೊಂಡಿದ್ದವರಿಗೆ ಬಿಗ್ ಬಾಸ್ ಬಿಗ್ ಶಾಕ್ ನೀಡಿದ್ದಾರೆ. ಈ ಬಾರಿ ಬಿಗ್ ಬಾಸ್ ಕಾಮನ್ ಮ್ಯಾನ್ ಗಳ ಶೋ ಆಗಿರಲಿದೆಯಂತೆ. ಹಾಗಿದ್ರೆ, ಈ ಸಲ ಬಿಗ್ ಮನೆಯಲ್ಲಿ ಎಷ್ಟು ಜನ ಕಾಮನ್ ಮ್ಯಾನ್ ಇರ್ತಾರೆ ಅನ್ನೋದೆ ಕುತೂಹಲದ ವಿಷಯ.  ಈ ಸಲ 18 ಜನ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯಲಿದ್ದಾರೆ. ಸಾಮಾನ್ಯವಾಗಿ ಅರ್ಧ ಜನ ಸೆಲೆಬ್ರಿಟಿಗಳು ಉಳಿದ ಅರ್ಧ ಜನ ಕಾಮನ್ ಮ್ಯಾನ್ ಇರ್ತಾರೆ. ಆದ್ರೆ, ಈ ಬಾರಿ ಸೆಲೆಬ್ರಿಟಿಗಳಿಗಿಂತ ಕಾಮನ್ ಮ್ಯಾನ್ ಗಳು ಹೆಚ್ಚು ಇರಲಿದ್ದಾರೆ ಎಂದು ಬಿಗ್ ಬಾಸ್ ಆಯೋಜನಕರೇ ಸುಳಿವು ನೀಡಿದ್ದಾರೆ. ಆದ್ರೆ, ಎಷ್ಟು ಜನ ಎಂಬ ಗುಟ್ಟನ್ನು ಬಿಗ್ ಬಾಸ್ ತಂಡ ಬಿಟ್ಟು ಕೊಟ್ಟಿಲ್ಲ.

Edited By

Manjula M

Reported By

Manjula M

Comments