ಶ್ರೀ ದೇವಿ ಪಾತ್ರಕ್ಕೆ ರಕುಲ್ ಪಡೆದ ಸಂಭಾವನೆ ಎಷ್ಟು ಗೊತ್ತಾ..!ಅದು 20 ನಿಮಿಷಕ್ಕೆ..!!

12 Oct 2018 10:20 AM | Entertainment
2223 Report

ಟಾಲಿವುಡ್ ನಲ್ಲಿ ಬರುತ್ತಿರುವ ಎನ್ ಟಿ ಆರ್ ಬಯೋಪಿಕ್ ಚಿತ್ರದಲ್ಲಿ ಶ್ರೀದೇವಿ ಪಾತ್ರವು ಇರಲಿದ್ದು, ಇದಕ್ಕೆ ರಕುಲ್ ಪ್ರೀತ್ ಸಿಂಗ್ ಜೀವ ತುಂಬಿದ್ದಾರೆ.ನಟಿ ರಕುಲ್ ಪ್ರೀತ್ ಸಿಂಗ್ ಈಗ ಈ ಸಿನಿಮಾದಲ್ಲಿ ಶ್ರೀದೇವಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರಕುಲ್ ಅವರ ಜನ್ಮದಿನದಂದು ಸಿನಿಮಾದ ಶ್ರೀ ದೇವಿ  ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಇದೀಗ ಅವರು ಆ ಪಾತ್ರಕ್ಕೆ ತೆಗೆದುಕೊಂಡ ಸಂಭಾವನೆ ಬಗ್ಗೆ ಸುದ್ದಿ ಬಂದಿದೆ. ಶ್ರೀ ದೇವಿ ಪಾತ್ರ ಮಾಡಲು ರಕುಲ್ ಬರೋಬ್ಬರಿ 1 ಕೋಟಿ ಹಣ ಪಡೆದಿದ್ದಾರಂತೆ. 1 ಕೋಟಿ ಸಂಭಾವನೆ ರಕುಲ್ ಪ್ರೀತ್ ಸಿಂಗ್ ಗೆ ಹೊಸತೇನು ಅಲ್ಲ ಬಿಡಿ... ಆದರೆ, ಈ ಸಿನಿಮಾದಲ್ಲಿ ಅವರ ಪಾತ್ರ ಇರುವುದು ಕೇವಲ 20 ನಿಮಿಷವಷ್ಟೆ . ಪಾತ್ರದ ಅವಧಿ ಕಡಿಮೆ ಕೂಡ ಇದ್ದರೂ ಅವರ ಸಂಭಾವನೆ ಕೋಟಿಯಾಗಿದೆ ಎನ್ನುವುದು ಅಚ್ಚರಿಯ ಸಂಗತಿ. ನಟ ಎನ್ ಟಿ ಆರ್ ಬಗ್ಗೆಯ ಈ ಸಿನಿಮಾ 'ಕಥಾ ನಾಯಕಡು' ಹಾಗೂ 'ಮಹಾ ನಾಯಕುಡು' ಎರಡು ಪಾರ್ಟ್ ಗಳಲ್ಲಿ ಬಿಡುಗಡೆಯಾಗುತ್ತಿದೆ.

Edited By

Manjula M

Reported By

Manjula M

Comments