ದರ್ಶನ್ ಹಾಗೂ ಸುದೀಪ್ ಮದಕರಿ ಚಿತ್ರಗಳ ವಿವಾದದ ಬಗ್ಗೆ ಸುದೀಪ್ ಟ್ವೀಟ್’ನಲ್ಲಿ  ಹೇಳಿದ್ದೇನು?

11 Oct 2018 10:11 AM | Entertainment
1308 Report

  ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸ್ಟಾರ್ ವಾರ್ ಶುರುವಾಗಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಅದಕ್ಕೆ ಕನ್ನಡಿ ಹಿಡಿದಂತೆ ದರ್ಶನ್ ಹಾಗೂ ಸುದೀಪ್ ಸಿನಿಮಾಗೆ ವಾದ ವಿವಾದಗಳು ಶುರುವಾಗಿವೆ.. ದರ್ಶನ್ ನಟಿಸಲಿರುವ 'ಗಂಡುಗಲಿ ಮದಕರಿ ನಾಯಕ' ಮತ್ತು ಸುದೀಪ್ ನಟಿಸಲಿರುವ ‘ದುರ್ಗದ ಹುಲಿ’ ಸಿನಿಮಾದ ಬಗ್ಗೆ ಸಾಕಷ್ಟು ವಿವಾದಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಇದೀಗ ಸುದೀಪ್ ಅವರು ಟ್ವೀಟರ್ ನಲ್ಲಿ ಈ ವಿಷಯದಲ್ಲಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಈಗಾಗಲೇ ಎರಡು ಸಿನಿಮಾಗಳ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಿದೆ. ಅಷ್ಟೆ ಅಲ್ಲದೇ ಅಭಿಮಾನಿಗಳು ಮಾತ್ರವಲ್ಲದೇ ಮಠದೀಶರೊಬ್ಬರು ಸಿನಿಮಾರಂಗಕ್ಕೂ ಜಾತಿ ಬಣ್ಣವನ್ನು ಬಳಿಯುತ್ತಿದ್ದು, ಈ ವಾದ ವಿವಾದಗಳು ವಿಕೋಪಕ್ಕೆ ಹೋಗಬಾರದು ಎಂಬ ಕಾರಣಕ್ಕೆ ಇದೀಗ ಸುದೀಪ್ ಟ್ವೀಟರ್ ನಲ್ಲಿ ಪತ್ರವೊಂದರ ಮೂಲಕ ಎಲ್ಲದಕ್ಕೂ ಸೃಷ್ಟೀಕರಣ ನೀಡಿದ್ದಾರೆ. ತಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನೆಮಾ ಹಾಗೂ ದರ್ಶನ್ ನಟಿಸಲಿರುವ ಸಿನಿಮಾ ಎರಡನ್ನು ಪ್ರೇಕ್ಷಕರಿಗೆ ಕೊಡುಗೆಯಾಗಿ ನೀಡೋಣ. ಈ ಎರಡೂ ಸಿನಿಮಾಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ ಎಂದು  ಸುದೀಪ್ ತಿಳಿಸಿದ್ದಾರೆ.

 

"ಈಗ ಚಾನೆಲ್ಲುಗಳು ಹಾಗೂ ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿರುವ ವಸ್ತು, ಚರ್ಚೆ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಿರುವoತಿದೆ.

ವಿಷಯ ಸರಳವಾಗಿದೆ... ರಾಕ್ ಲೈನ್ ವೆಂಕಟೇಶ್ ಅವರು ತಮಗೆ ಇಷ್ಟವಿರುವ ಸಿನೆಮಾ ಮಾಡುತ್ತಿದ್ದಾರೆ. ನಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನೆಮಾ ನಾನು ಮುಂದುವರೆಸುತ್ತೇನೆ. ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ.

ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ.

ಕ್ರಿಯಾಶೀಲ ಕೆಲಸಗಳಲ್ಲಿ ಎಂದೂ ಜಾತಿಯ ಯೋಚನೆಗಳು ಬರುವುದಿಲ್ಲ, ಬರಕೂಡದು. ಸ್ವಾಮೀಜಿಗಳು, ರಾಕ್ ಲೈನ್ ವೆಂಕಟೇಶ್ ರವರು ಹಾಗು ಚಾನೆಲ್ ರವರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ ಇದು ನನಗೆ ಚರ್ಚೆಯ ವಿಷಯವೇ ಅಲ್ಲ. ನನ್ನ ಹಿಂದಿನ ಪತ್ರದಲ್ಲೂ ಇದನ್ನು ಸ್ಪಷ್ಟಪಡಿಸಿದ್ದೇನೆ.

ಸಿನೆಮಾ ಮಾಡುವುದೇ ಪ್ರೇಕ್ಷಕರಿಗಾಗಿ. ಎರಡೂ ಸಿನೆಮಾಗಳನ್ನು ಅವರಿಗೆ ಕೊಡುಗೆ ಕೊಡೋಣ. ಎರಡೂ ಚಿತ್ರಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ. ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ಏರಡು ಚಿತ್ರಗಳು ಮಾಡಿ ಅವರಿಗೆ ಗೌರವಿಸೋಣ.

ಗಮನ ಹರಿಸಲು ಇದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಸಮಸ್ಯೆಗಳು ಬಹಳಷ್ಟಿವೆ. ಇದಕ್ಕೆ ಹರಿಬಿಟ್ಟ ಶಕ್ತಿ ಹಾಗು ಶ್ರಮ ಆ ಸಮಸ್ಯೆಗಳಿಗೆ ವ್ಯಯಿಸಿದರೆ ಎಲ್ಲರ ಜೀವನವು ಸ್ವಲ್ಪವಾದರೂ ಹಸನಾದೀತು. ಯೋಚನೆಗಳು ಯಾವಾಗಲೂ ಜನಪರವಾಗಿರಲೆಂದು ನನ್ನ ಈ ಎರಡು ಮಾತುಗಳೇ ಹೊರತು ಯಾರ ಮನಸನ್ನು ನೋಯಿಸಲು ಅಲ್ಲ.

ಪ್ರೀತಿಯಿಂದ
ನಿಮ್ಮವ
ಕಿಚ್ಚ. "

Edited By

Manjula M

Reported By

Manjula M

Comments