ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಕುರುಕ್ಷೇತ್ರ ರಿಲೀಸ್ ಡೇಟ್ ಫಿಕ್ಸ್..!

10 Oct 2018 9:37 AM | Entertainment
1498 Report

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಇನ್ನೂ ಕೂಡ ಬಿಡುಗಡೆಯಾಗದಿರುವುದು ಅಭಿಮಾನಿಗಳಿಗೆ ಬಹಳ ಬೇಸರ ತಂದಿದೆ. ಅಭಿಮಾನಿಗಳು ಆ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

ಕುರುಕ್ಷೇತ್ರ ಸಿನಿಮಾಗೂ ಮುನ್ನ ಯಜಮಾನ ಸಿನಿಮಾ ಬರಬಹುದೇನೋ ಎಂಬ  ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಆದರೆ ನಿರ್ಮಾಪಕ ಮುನಿರತ್ನ ಅವರು ಸದ್ದಿಲ್ಲದೇ ಸಿನಿಮಾವನ್ನು ರಿಲೀಸ್ ಮಾಡೋಕೆ ಇದೀಗ ಮುಂದಾಗಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಸ್ವತಹ ಮುನಿರತ್ನ ಅವರೇ ಸಿನಿಮಾ ನೋಡಿದ ನಂತರ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಮಾಡುತ್ತಾರಂತೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಮುಗಿದಿದ್ದು. ನವೆಂಬರ್ 5 ರಂದು ಸಿನಿಮಾದ ಕೆಲಸ ಮುಗಿಯುತ್ತಂತೆ. ನವೆಂಬರ್ 10 ರಂದು ಕುರುಕ್ಷೇತ್ರ ಸಿನಿಮಾವನ್ನು ಮುನಿರತ್ನ ನೋಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ನಾಲ್ಕು ಹಾಡುಗಳ ಜೊತೆಗೆ ಸುಮಾರು 12 ಶ್ಲೋಕಗಳಿರೋ ಕುರುಕ್ಷೇತ್ರ ಸಿನಿಮಾಕ್ಕೆ ವಿ. ಹರಿಕೃಷ್ಣ ಅವರು ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ನಾಗಣ್ಣ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾದಲ್ಲಿ ಅತ್ಯಂತ ದೊಡ್ಡ ತಾರಾ ಬಳಗವೇ ಇದೆ.. ಒಟ್ಟಾರೆಯಾಗಿ ಸಿನಿ ರಸಿಕರು ಕುರುಕ್ಷೇತ್ರ ಸಿನಿಮಾಕ್ಕಾಗಿ ಕಾಯುತ್ತಿರುವುದಂತೂ ಸುಳ್ಳಲ್ಲ.

Edited By

Manjula M

Reported By

Manjula M

Comments