ಜೀವನ ನಿರ್ವಹಣೆಗೆ ಆಸ್ತಿ ಮಾರಲು ಮುಂದಾದ ನಟ ವಿನೋದ್ ರಾಜ್..!

09 Oct 2018 3:32 PM | Entertainment
4938 Report

ಈ ಬಣ್ಣದ ಲೋಕವೇ ಹೀಗೆ.. ಕೆಲವರನ್ನು ಕೈ ಬೀಸಿ ಕರೆಯುತ್ತೆ ಮತ್ತೆ ಕೆಲವೊಮ್ಮೆ ಕೈ ಬಿಟ್ಟು ಬಿಡುತ್ತೆ.. ಒಂದು ಕಾಲದಲ್ಲಿ ತುಂಬಾ ಫೇಮಸ್ ಆಗಿದ್ದ ನಟಿ ಹಾಗೂ ಅವರ ಮಗ ಇದೀಗ ಆಸ್ತಿ ಮಾರುವ ಪರಿಸ್ಥಿತಿಗೆ ಬಂದಿದ್ದಾರೆ. ಕಾರಿನ ಟಯರ್ ಪಂಚರ್ ಆಗಿದೆ ಎಂದು ಹೇಳಿ ನಟ ವಿನೋದ್ ರಾಜ್ ಅವರ ಕಾರಿನಲ್ಲಿದ್ದ ಒಂದು ಲಕ್ಷ ರೂಪಾಯಿಯನ್ನು ಇಬ್ಬರು ಕಳ್ಳರು ದೋಚಿದ ಘಟನೆ ಇತ್ತೀಚಿಗಷ್ಟೆ ನೆಲಮಂಗಲದಲ್ಲಿ ನಡೆದಿತ್ತು.  

ಇನ್ನು ಈ ನಡುವೆ ತಮ್ಮ ಜೀವನಕ್ಕಾಗಿ ನಟ ವಿನೋದ್ ರಾಜ್ ಅವರು ಚೆನೈ‌ನಲ್ಲಿರುವ ಆಸ್ತಿ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯವಾಗಿ ಖುದ್ದು ನಟ ವಿನೋದ್ ರಾಜ್ ಅವರು ನೆಲಮಂಗಲದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಸದ್ಯ ಈಗ ನಾವಿರುವ ಪರಿಸ್ಥಿತಿಯಲ್ಲಿ ಜೀವನವನ್ನು ನಡೆಸುವುದು ತುಂಬಾ ಕಷ್ಟವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಕೃಷಿ ಮಾಡುವುದು ಕಷ್ಟಕರವಾಗಿದ್ದು, ಕೂಲಿ ಆಳುಗಳಿಗೆ ಹಣ ನೀಡುವುದು ಕೂಡ ಕಷ್ಟವಾಗಿ ಬಿಟ್ಟಿದೆ. ಭವಿಷ್ಯದ ದೃಷ್ಟಿಯಿಂದ ಚೆನೈನಲ್ಲಿರುವ 5 ಎಕರೆ ತೋಟ ಮಾರಾಟ ಮಾಡಲು ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ.  ಅಮ್ಮ ಮಾಡಿಟ್ಟಿರುವ ಆಸ್ತಿಯನ್ನು ಜೀವನಕ್ಕಾಗಿ ಮಾರಾಟ ಮಾಡಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣಕ್ಕೆ ನಾವು ಈ ತೀರ್ಮಾನಕ್ಕೆ ಬಂದಿದ್ದವೇ ಎಂದು ಬೇಸರದಿಂದ ಹೇಳಿದ್ದಾರೆ.

Edited By

Manjula M

Reported By

Manjula M

Comments

Cancel
Done