ಕನ್ನಡ ನಿರ್ಮಾಪಕರ ಪರ ಧ್ವನಿ ಎತ್ತಿದ ನಿರ್ದೇಶಕ ಜೋಗಿ ಪ್ರೇಮ್

06 Oct 2018 12:26 PM | Entertainment
411 Report

ನಿರ್ದೇಶಕರಾದ ಜೋಗಿ ಪ್ರೇಮ್ ಈ ತಿಂಗಳು ತುಂಬಾ ಬ್ಯುಸಿ ಇದ್ದಾರೆ. ಅದಕ್ಕೆ ಕಾರಣ ನಿಮಗೆಲ್ಲಾ ತಿಳಿದೆ ಇದೆ. ಅವರ ನಿರ್ದೇಶನದ 'ದಿ ವಿಲನ್' ಸಿನಿಮಾ ಇದೇ ತಿಂಗಳ 18ರಂದು ರಾಜ್ಯಾದ್ಯಾಂತ ತೆರೆ ಕಾಣುತ್ತಿದೆ. ಮಲ್ಟಿಸ್ಟಾರ್ ಗಳ ಸಿನಿಮಾವಾಗಿರುವುದರಿಂದ ಅಭಿಮಾನಿಗಳು ಪುಲ್ ಖುಷ್ ಆಗಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಜೋಗಿ ಪ್ರೇಮ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಂದು ಮನವಿಯನ್ನು ಸಲ್ಲಿಸಿದ್ದಾರೆ. ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನದ ಹಣದಲ್ಲಿ 50% ರಷ್ಟುನ್ನು ಆ ಸಿನಿಮಾದ ನಿರ್ಮಾಪಕರಿಗೆ ಕೊಡಬೇಕು ಎಂದು ಪ್ರೇಮ್ ಮನವಿಯನ್ನು ಸಲ್ಲಿಸಿದ್ದಾರೆ. ಇರುವ ನಿಯಮದಿಂದ ದೊಡ್ಡ ಸಿನಿಮಾ ಮಾಡುವ ನಿರ್ಮಾಪಕರಿಗೆ ನಷ್ಟ ಆಗಲಿದ್ದು, ಶೇಕಡ 50 ರಷ್ಡು ಕಲೆಕ್ಷನ್ ಪ್ರೊಡೂಸರ್ ಗೆ ಸೇರಬೇಕು ಎಂಬುದು ಪ್ರೇಮ್ ಅವರ ಮಾತಾಗಿದೆ. ಈ ಬಗ್ಗೆ ಮನವಿ ಪತ್ರವನ್ನು ಸ್ವೀಕರಿಸಿದ ಫಿಲ್ಮ್ ಛೇಂಬರ್ ಮಲ್ಟಿಪ್ಲೆಕ್ಸ್ ಜೊತೆಗೆ ಮಾತುಕತೆ ನಡೆಸಿ ನಂತರ ಸೋಮವಾರ ತನ್ನ ನಿರ್ಧಾರವನ್ನು ಪ್ರಕಟ ಮಾಡಲಿದೆ. ಹಾಗೆನಾದರೂ, ಒಂದು ವೇಳೆ ಈ ಹೊಸ ನಿಯಮ ಜಾರಿಗೆ ಬಂದರೆ ನಿರ್ಮಾಪಕರು ಒಂದಷ್ಟು ಲಾಭ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ..

Edited By

Manjula M

Reported By

Manjula M

Comments