ದರ್ಶನ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್..! ಏನ್ ಗೊತ್ತಾ..?

05 Oct 2018 4:28 PM | Entertainment
598 Report

ಇತ್ತಿಚಿಗಷ್ಟೆ ಕಾರು ಅಪಘಾತದಲ್ಲಿ ಬಲ ಕೈ ಮೂಳೆ ಮುರಿದ ಕಾರಣ ದರ್ಶನ್ ಕೈಗೆ ಆಪರೇಷನ್ ಆಗಿದ್ದು, ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಶ್ರಾಂತಿಯಲ್ಲಿದ್ದಾರೆ. ಇನ್ನು ಅವರು ಮೈಸೂರಿನಲ್ಲಿ ನಡೆಯಲಿರುವ ರೇಸ್ ನಲ್ಲಿ ಕಾರು ಓಡಿಸವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ.

ಇನ್ನೊಂದು ವಾರದೊಳಗೆ ರೇಸ್ ನಲ್ಲಿ ಕಾರು ಓಡಿಸಬೇಕು ಅಂತ ದರ್ಶನ್ ತಮಗೆ ಚಿಕಿತ್ಸೆ ನೀಡಲಾಗುತ್ತಿರುವ ವೈದ್ಯರ ಬಳಿ ಕೇಳಿದ ವೇಳೆಯಲ್ಲಿ ಅವರಿಗೆ ವೈಧ್ಯರು ರೇಸ್ ಇರಲಿ ನೀವು ಡ್ರೈವ್ ಕೂಡ ಮಾಡುವುದಕ್ಕೆ ಆಗುವುದಿಲ್ಲ. ಇನ್ನು ಏನಿದ್ದರೂ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಅಂತ ತಿಳಿದು ಬಂದಿದೆ. ರೇಸ್ ಗಾಗಿ ದರ್ಶನ್ 10 ದಿನಗಳ ಕಾಲ ತರಬೇತಿ ಕೂಡ ಮಾಡಿಕೊಂಡಿದ್ದರು.. ಅದಕ್ಕಾಗಿಯೇ ವಿಶೇಷ ಡ್ರೈವಿಂಗ್ ಲೈಸನ್ಸ್ ಸಹ ಮಾಡಿಸಿಕೊಂಡಿದ್ದರು., ಆದರೆ ಅಪಘಾತದ ಬಳಿಕ ಅವರು ಕೈ ಸರಿ ಇರದ ಕಾರಣ ಅವರು ರೇಸ್‍ನಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಭಾನುವಾರ ರೇಸ್ ವೀಕ್ಷಿಸಲು ದರ್ಶನ್ ಬರುತ್ತಾರೆ ಎಂದು ಗ್ರಾವೆಲ್ ಫೆಸ್ಟ್ ಆಯೋಜಕರು ಹೇಳಿದ್ದಾರೆ

Edited By

Manjula M

Reported By

Manjula M

Comments