26 ನೇ ವಸಂತಕ್ಕೆ ಕಾಲಿಟ್ಟ ಚಂದನವನದ ಡಿಂಪಲ್ ಕ್ವೀನ್: ಹ್ಯಾಪಿ ಬರ್ತಡೇ ರಚಿತಾ

03 Oct 2018 11:46 AM | Entertainment
981 Report

 ಚಂದನವನದಲ್ಲಿ ಇತ್ತಿಚಿಗೆ ಬಾರಿ ಬೇಡಿಕೆ ನಟಿಯರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ..  ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಚಿತಾ ಅಯೋಗ್ಯ ಸಿನಿಮಾದವರೆಗೂ ಕೊಟ್ಟಿರೋದೆಲ್ಲ ಸೂಪರ್ ಹಿಟ್ ಸಿನಿಮಾಗಳೇ. ರಚಿತಾ ರಾಮ್ ಇಂದು 26 ನೇ ವಸಂಕ್ಕೆ ಕಾಲಿಡುತ್ತಿದ್ದಾರೆ.ಅಭಿಮಾನಿಗಳು ನೆಚ್ಚಿನ ನಟಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸುತ್ತಿದ್ದಾರೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಚಂದನವನಕ್ಕೆ ಬಂದು ಐದು ವರ್ಷಗಳಾಗಿದ್ದು, ಈ ಅವಧಿಯಲ್ಲೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಅನೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ರಚಿತಾ ರಾಮ್ ಸದ್ಯ ಅಯೋಗ್ಯ ಸಿನಿಮಾ ಸಕ್ಸಸ್ ನ ಖುಷಿಯಲಿದ್ದಾರೆ. ರಚಿತಾ ರಾಮ್ ಅಭಿನಯದ ನಟ ಸಾರ್ವಭೌಮ, ಐ ಲವ್ ಯೂ ಹಾಗೂ ಸೀತಾರಾಮ ಕಲ್ಯಾಣ ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ. ಡಿಂಪಲ್ ಕ್ವೀನ್ ಗೆ ನಮ್ಮ ಸಿವಿಕ್ ನ್ಯೂಸ್ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಷಯಗಳು..

Edited By

Manjula M

Reported By

Manjula M

Comments