ದರ್ಶನ್ ರನ್ನು ನೋಡಲು ದಿನಕರ್ ಬರಲಿಲ್ಲ..! ಕಾರಣ ಏನ್ ಗೊತ್ತಾ?

27 Sep 2018 12:39 PM | Entertainment
246 Report

ಕಳೆದ ಸೋಮವಾರವಷ್ಟೆ ಅಪಘಾತದಲ್ಲಿ ಕೈ ಮುರಿದುಕೊಂಡುಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಲು ಅವರ ತಮ್ಮ ನಿರ್ದೇಶಕ ದಿನಕರ್ ತೂಗುದೀಪ ಅವರು ಬಂದಿಲ್ಲ. ಈ ಮಧ್ಯೆ ದಿನಕರ್ ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆಗಳು ಕೂಡ ಕಾಡತೊಡಗಿವೆ.

ಸದ್ಯ ದೊರೆತಿರುವ ಮಾಹಿತಿಗಳ ಪ್ರಕಾರ ದಿನಕರ್ ಅವರಿಗೆ ಕಳೆದ ಒಂದು ವಾರದಿಂದ ಬಿಡದೆ ವೈರಲ್ ಫೀವರ್ ಕಾಡುತ್ತಿದೆ ಈ ಹಿನ್ನಲೆಯಲ್ಲಿ ದಿನಕರ್ ತೂಗುದೀಪ ಅವರು ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇನ್ನು ಪ್ರತಿ ನಿತ್ಯ ದರ್ಶನ್ ಗೆ ಕರೆ ಮಾಡಿ ದಿನಕರ್ ತೂಗುದೀಪ ಅವರು ದರ್ಶನ್ ಅವರ ಆರೋಗ್ಯವನ್ನು  ವಿಚಾರಿಸಿಕೊಳ್ಳುತ್ತಿದ್ದರೆ ಎನ್ನಲಾಗಿದ್ದು, ದರ್ಶನ್ ನೀನು ಬರೋದು ಬೇಡ, ಇಲ್ಲಿ ಎಲ್ಲ ಸರಿ ಇದೆ, ನೀನು ರೆಸ್ಟ್ ಮಾಡು ಅಂತ ದಿನಕರ್ ತೂಗುದೀಪ ಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments