ಅಂಡಮಾನ್-ನಿಕೋಬಾರ್‌ನಲ್ಲಿ 'ಸರ್ಕಾರಿ ಶಾಲೆ' ತೆರೆಯಲಿರುವ ನಿರ್ದೇಶಕ ರಿಷಬ್ ಶೆಟ್ಟಿ..!

27 Sep 2018 11:35 AM | Entertainment
554 Report

 ಚಂದನವನದಲ್ಲಿ ಇತ್ತಿಚಿಗಷ್ಟೆ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶನದ 'ಸಹಿಪ್ರಾ ಶಾಲೆ ಕಾಸರಗೋಡು' ಚಿತ್ರ ಹೊಸ ದಾಖಲೆಯನ್ನು ಬರೆದಿದೆ. ಈ ಸಿನಿಮಾವು ಈಗ ಅಂಡಮಾನ್ ನಿಕೋಬಾರ್‌ನಲ್ಲಿ ಪ್ರದರ್ಶನವಾಗುತ್ತಿದೆ. ಅಷ್ಟೆ ಅಲ್ಲದೆ ಅಂಡಮಾನ್ ನಿಕೋಬಾರ್‌ನಲ್ಲಿ ಪ್ರದರ್ಶನಗೊಂಡ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ದಾಖಲೆ 'ಸಹಿಪ್ರಾ ಶಾಲೆ ಕಾಸರಗೋಡು' ಚಿತ್ರದ ಮುಡಿಗೇರಿದೆ.

ಕರ್ನಾಟಕದಲ್ಲಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿರುವ ಈ ಚಿತ್ರ ನಂತರ ಬೇರೆ ರಾಜ್ಯಗಳಲ್ಲಿ ಮತ್ತು ಬೇರೆ ದೇಶಗಳಲ್ಲಿ ಕನ್ನಡಿಗರ ಮೆಚ್ಚುಗೆ ಗಳಿಸುತ್ತಾ ಮುನ್ನುಗುತ್ತಿದೆ. ಅಮೆರಿಕಾ, ಯುರೋಪ್‌ಗಳಲ್ಲಿ  ಕೂಡ ಮುಂದುವರಿಸಿದೆ. ಅಮೆರಿಕಾದ ಕೆಲವು ಕಡೆಗಳಲ್ಲಿ ಕಿರಿಕ್‌ಪಾರ್ಟಿ ಮತ್ತು ರಂಗಿತರಂಗ ಚಿತ್ರದ ಗಳಿಕೆಯ ದಾಖಲೆಯನ್ನು ರಿಷಬ್ ಶೆಟ್ಟಿ ಸಹಿಪ್ರಾ ಶಾಲೆ ಕಾಸರಗೋಡು ಚಿತ್ರ ಬ್ರೇಕ್ ಮಾಡಿದೆ. ಅಂಡಮಾನ್- ನಿಕೋಬಾರ್‌ನಲ್ಲಿ ತನ್ನ ಯಶಸ್ಸನ್ನು ದಾಖಲಿಸಲು ಮುಂದಾಗಿದೆ. ಸೆ.29 ಮತ್ತು 30 ರಂದು ಪೋರ್ಟ್‌ಬ್ಲೇರ್ನ ದಿವ್ಯಂ ಟಾಕೀಸಿನಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ಅಲ್ಲಿನ ಕನ್ನಡ ಸಂಘದವರು ಈ ಚಿತ್ರವನ್ನು ನೋಡಲು ಕಾಯುತ್ತಿದ್ದಾರೆ ಎನ್ನಲಾಗಿದೆ

Edited By

Manjula M

Reported By

Manjula M

Comments