ಸ್ಯಾಂಡಲ್’ವುಡ್ ಗೌರಮ್ಮನ ವಿರುದ್ಧ ದಾಖಲಾಯ್ತು ಎಫ್ಐಆರ್..! ಕಾರಣ ಏನ್ ಗೊತ್ತಾ..?

26 Sep 2018 9:45 AM | Entertainment
430 Report

ರಾಜಕೀಯ ಎಂಬ ದೊಂಬರಾಟದಲ್ಲಿ ಒಬ್ಬರನ್ನು ಒಬ್ಬರು ಟೀಕಿಸುವ ಭರದಲ್ಲಿ ತಮ್ಮ ಗುಂಡಿಯನ್ನು ತಾವೆ ತೋಡಿಕೊಳ್ಳುತ್ತಾರೆ. ಅದೇ ರೀತಿಯಾಗಿ ನಟಿ ಹಾಗೂ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಕೂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ನಿಂದನಾತ್ಮಕ ಫೋಟೊವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದ ಕಾರಣ ಇದೀಗ ಅವರ ಮೇಲೆ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಧಾನಿ ಮೋದಿ ಅವರ ವಿರುದ್ಧ ದ್ವೇಷ ಕಾರುವಂತಹ ಪೋಸ್ಟ್ ಅನ್ನು ರಮ್ಯಾ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಲಖನೌ ಮೂಲದ ಕಾರ್ಯಕರ್ತ ಹಾಗೂ ವಕೀಲ ಸಯ್ಯದ್ ರಿಜ್ವಾನ್ ಅಹ್ಮದ್ ಅವರು ಗೊಮ್ಟಿನಗರ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಮ್ಯ ವಿರುದ್ದ  ದೂರು ದಾಖಲಿಸಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆ 2008ರ ಸೆಕ್ಷನ್ 67 ಮತ್ತು ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ ರಮ್ಯಾ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ..ಮೋದಿ ಅವರನ್ನು 'ಕಳ್ಳ' ಎಂದು ರಮ್ಯ ನಿಂದಿಸಿದ್ದರು..ಈ ಬಗ್ಗೆ ಬಿಜೆಪಿ ಮತ್ತು ಮೋದಿ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿಯೇ ರಮ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮೋದಿ ಅಭಿಮಾನಿಗಳು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

Edited By

Manjula M

Reported By

Manjula M

Comments