ಇಂದು ವರನಟ ರಾಜ್ ಕುಮಾರ್ ಅಪಹರಣ ಪ್ರಕರಣದ ತೀರ್ಪು ಪ್ರಕಟ

25 Sep 2018 9:53 AM | Entertainment
253 Report

ದಂತಚೋರ ವೀರಪ್ಪನ್ ಮತ್ತು ಆತನ ಸಂಗಡಿಗರು 18 ವರ್ಷಗಳ ಹಿಂದೆ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರನ್ನು, ಅಪಹರಣ ಮಾಡಿದ್ದ ಪ್ರಕರಣ ಸಂಬಂಧವಾಗಿ ದಾಖಲಾಗಿದ್ದ ಕೇಸಿನ ತೀರ್ಪು ಇಂದು ಪ್ರಕಟವಾಗಲಿದೆ. ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಈ ತೀರ್ಪುನ್ನು ಪ್ರಕಟಿಸಲಿದೆ.

ಜುಲೈ 30, 2000ನೇ ಇಸವಿಯಲ್ಲಿ ತಮಿಳುನಾಡಿನ ಗಡಿಭಾಗದಲ್ಲಿರುವ ಗಾಜನೂರಿನ ಮನೆಯಿಂದ ವರನಟ ರಾಜ್‌ಕುಮಾರ್ ಅವರನ್ನು ದಂತಚೋರ ವೀರಪ್ಪನ್ ಅಪಹರಿಸಿದ್ದರು.. ಈ ಸಂಬಂಧವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಗಲಾಟೆಗಳು ಆಗಿದ್ದವು.  ರಾಜ್ ಕುಮಾರ್ ಅವರನ್ನು  ಬಿಡಿಸಲು ಎರಡು ರಾಜ್ಯಗಳು ಭಾರೀ ಶ್ರಮವನ್ನು ವಹಿಸಿದ್ದವು. ಕೊನೆಯದಾಗಿ 108 ದಿನದ ಬಳಿಕ ರಾಜ್‌ ಕುಮಾರ್ ಅವರನ್ನು ವೀರಪ್ಪನ್ ಯಾವುದೇ ತೊಂದರೆ ಇಲ್ಲದೆ ಬಿಡುಗಡೆ ಮಾಡಿದ್ದರು. ಈ ವಿಷಯವಾಗಿ ದಂತ ಚೋರ ವೀರಪ್ಪನ್ ಸೇರಿದಂತೆ 8 ಜನರ ವಿರುದ್ಧ ಆರೋಪಟ್ಟಿಯನ್ನು ಸಿದ್ದ ಪಡಿಸಲಾಗಿತ್ತು..ಆದರೆ ವಿಚಾರಣೆ ವೇಳೆ ವೀರಪ್ಪನ್, ಸೇತುಕುಡಿ ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. ಇನ್ನುಳಿದ 5 ಜನ ಹಾಲಿ ಪ್ರಕರಣ ಸಂಬಂಧವಾಗಿ ಜೈಲು ಸೇರಿದ್ದಾರೆ. ಇಂದು ಈ ವಿಚಾರವಾಗಿ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಈ ತೀರ್ಪು ಪ್ರಕಟವಾಗಲಿದೆ.

Edited By

Manjula M

Reported By

Manjula M

Comments