‘ಸ್ಲಂಬಾಲ’ನಿಗೆ ಎದುರಾಯ್ತು ಮತ್ತೊಂದು ಸಂಕಷ್ಟ : ‘ಜಂಗ್ಲಿ’ಯ ಹೆಸರಿನಲ್ಲಿ ತೆರೆದುಕೊಳ್ಳುತ್ತಾ ರೌಡಿ ಶೀಟರ್..!?

24 Sep 2018 3:44 PM | Entertainment
391 Report

ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ಈಗ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ನಡುವೆ ದಿನದಿಂದ ದಿನಕ್ಕೆ ನಟ ದುನಿಯಾ ವಿಜಯ್ ಮೇಲೆ ಅನೇಕ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ದುನಿಯಾ ವಿಜಯ್ ವಿರುದ್ದ ರೌಡಿ ಶೀಟರ್‍ ತೆರೆಯಲು ಪೋಲಿಸರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.  

ಇದೆಲ್ಲದರ ನಡುವೆ ಇಂದು ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ನಗರ ಪೋಲಿಸ್ ಆಯುಕ್ತ ಸುನೀಲ್ ಕುಮಾರ್‍ ಅವರು ಸದ್ಯಕ್ಕೆ ರೌಡಿ ಶೀಟರ್ ತೆಗೆಯುವ ಬಗ್ಗೆ ಯಾವುದೇ ರೀತಿಯ ಚಿಂತನೆ ನಡೆಸಿಲ್ಲ, ಒಂದು ವೇಳೆ ಅಗತ್ಯವಿದ್ದರೆ ಮಾತ್ರ ಈ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಅವರು ಸದ್ಯಕ್ಕೆ ಕ್ರೈಂ ಬ್ರಾಂಚ್ ಗೆ ಕೇಸ್ ಅನ್ನು ವರ್ಗಾವಣೆಯಾಗುವುದಿಲ್ಲ, ನಮ್ಮ ವಿಭಾಗದವೇ ಈ ಕೇಸ್ ಅನ್ನು ನಿಭಾಯಿಸುತ್ತಾರೆ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments