ರಾಮೇಶ್ವರಂನಲ್ಲಿ ತಂದೆಯ ಅಸ್ಥಿ ವಿಸರ್ಜನೆ ಮಾಡಿದ ಗಣೇಶ್

30 Aug 2018 4:01 PM | Entertainment
261 Report

ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಅವರ ತಂದೆ ಸಾಕಷ್ಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ನಿಮಿತ್ತ ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಗೋಲ್ಡನ್ ಸ್ಟಾರ್ ಗಣೇಶ್ ಅವರ ತಂದೆ ರಾಮಕೃಷ್ಣಪ್ಪ ಅವರು ಅನಾರೋಗ್ಯದ ಕಾರಣದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದಷ್ಟೆ ಮೃತಪಟ್ಟಿದ್ದರು.. ಸಾಕಷ್ಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತಹ ರಾಮಕೃಷ್ಣಪ್ಪ (82) ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು  ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಅಡಕಮಾರನಹಳ್ಳಿಯವರಾದ ಗೋಲ್ಡನ್ ಸ್ಟಾರ್ ಕುಟುಂಬದವರು ಅಲ್ಲಿಯೇ ಮೃತರ ಅಂತ್ಯಕ್ರಿಯೆ ನಡೆಸಿದ್ದರು.  ನಟ ಗೋಲ್ಡನ್ ಸ್ಟಾರ್ ಗಣೇಶ್​ ಅವರ ತಂದೆಯ ಅಸ್ಥಿಯನ್ನು ರಾಮೇಶ್ವರಂನ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗಿದೆ. ಇಂದು ಅವರ ಅಸ್ಥಿಯನ್ನು ರಾಮೇಶ್ವರಂನಲ್ಲಿ ಬಿಡಲಾಗಿದೆ. ಈ ವೇಳೆ ಗಣೇಶ್​ ಜತೆ ಅವರ ಸ್ನೇಹಿತ, ನಟ ರವಿಶಂಕರ್ ಹಾಗೂ ಪ್ರೀತಂ ಗುಬ್ಬಿ ಜೊತೆಯಿದ್ದರು.

Edited By

Manjula M

Reported By

Manjula M

Comments